ಉಚಿತ ಆರೋಗ್ಯ ಮತ್ತು ಶಿಕ್ಷಣ ಕ್ರಾಂತಿಯ ಹರಿಕಾರ- ಶ್ರೀ ಮಧುಸೂಧನ ಸಾಯಿ

0
66

ರಾಜ್ಯದ ಜನರು ಹೃದಯಾಘಾತ ಎಂಬ ಸಮಸ್ಯೆಗೆ ತುತ್ತಾಗಿದ್ದು, ವರದಿಗಳನ್ನ ಕಂಡಾಗ ಸಮಸ್ಯೆಯ ಗಂಭೀರತೆಯ ಅರಿವು ಮತ್ತು ಚಿಕಿತ್ಸೆ ಹೇಗಪ್ಪಾ ಎಂದು ಒಂದು ರೀತಿಯ ಭಯ ಜನರನ್ನು ಕಾಡುತ್ತಿದೆ, ಆದರೆ ರಾಜ್ಯದ ಒಂದು ಆಸ್ಪತ್ರೆ ಉಚಿತ ಉತ್ತಮ ಚಿಕಿತ್ಸೆ ನೀಡುತ್ತಿದೆ, ಹೃದಯ ಕಾಯಿಲೆ ಸಂಬಂಧಿಸಿದ ಜನರ ಪಾಲಿಗೆ ಮರುಜನ್ಮ ನೀಡುತ್ತಿದೆ ಅದುವೇ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಯಲ್ಲಿರುವ ಮಧುಸೂದನ್ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಎಂಬ ಆಸ್ಪತ್ರೆ,ಈ ಸಂಸ್ಥೆ ಮುದ್ದೇನಹಳ್ಳಿಯಲ್ಲಿ 360 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಡೆಸುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯಕೀಯ ಸೇವೆಗಳು ಸಂಪೂರ್ಣ ಉಚಿತವಾಗಿ ಲಭ್ಯವಿದೆ.

ಹೃದಯ ವಿಭಾಗಕ್ಕೆ ಸಂಬಂಧಿಸಿದಂತೆ ದೇಶೀಯ ಮತ್ತು ಅಂತರರಾಷ್ಟ್ರೀಯ ತಜ್ಞರಿಂದ ಸೇವೆಗಳನ್ನು ಒದಗಿಸಲಾಗುತ್ತಿದೆ. ಇಲ್ಲಿ ಅತ್ಯಾಧುನಿಕ ಉಪಕರಣಗಳೊಂದಿಗೆ, ಚಿಕಿತ್ಸೆ ನೀಡಲು ಎಲ್ಲಾ ವ್ಯವಸ್ಥೆಗಳಿವೆ. ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಆಧ್ಯಾತ್ಮಿಕ ಗುರು ಮಧುಸೂದನ್ ಸಾಯಿ ಅವರ ನೇತೃತ್ವದಲ್ಲಿ ಈ ಆಸ್ಪತ್ರೆಯಲ್ಲಿ ಉಚಿತ ಸೇವೆ ನೀಡಲಾಗುತ್ತಿದೆ. ಶ್ರೀ ಮಧುಸೂದನ್ ಸಾಯಿ ಪ್ರಾರಂಭಿಸಿದ ಶ್ರೀ ಸತ್ಯ ಸಾಯಿ ಗ್ಲೋಬಲ್ ಹ್ಯುಮಾನಿಟೇರಿಯನ್ ಮಿಷನ್ ಮೂಲಕ ಕಳೆದ ಸುಮಾರು ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹೃದಯ ಸಂಬಂಧಿ ರೋಗಿಗಳ ಕಾಯಿಲೆಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗಿದೆ.

ಅಲ್ಲದೆ ವಿದೇಶಗಳಲ್ಲೂ ಸಹ ಉಚಿತ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದು ಪ್ರಪಂಚದಾದ್ಯಂತ ಒಟ್ಟು 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸಂಪೂರ್ಣ ಉಚಿತ ಆರೋಗ್ಯ ಸೇವೆ ನೀಡುತ್ತಿವೆ.

ಮಧುಸೂದನ್ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್, ಮುದ್ದೇನಹಳ್ಳಿ, ಸತ್ಯ ಸಾಯಿ ಗ್ರಾಮ, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ. ಇಲ್ಲಿಗೆ ಸಂಪರ್ಕಿಸಬಹುದಾಗಿದೆ

ಅಲ್ಲದೆ ಶ್ರೀ ಮಧುಸೂಧನ ಸಾಯಿ ನೇತೃತ್ವದಲ್ಲಿ ಭಾರತ ಮತ್ತು ವಿಶ್ವದ ಅನೇಕ ದೇಶಗಳಲ್ಲಿ ಸಂಪೂರ್ಣ ಉಚಿತ ಶಿಕ್ಷಣ ವ್ಯವಸ್ಥೆ ಇದ್ದು, ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ವಸತಿ,,ಆಹಾರ,ಶಿಕ್ಷಣ,ಆರೋಗ್ಯ, ಸಂಸ್ಕೃತಿ, ಸಂಸ್ಕಾರ ನೀಡುವ ಶಿಕ್ಷಣ ದೇಗುಲವೆನಿಸಿದೆ, ಸಂಬಂಧ ಪಟ್ಟ ಸಂಸ್ಥೆಯಿಂದ ಮಾಹಿತಿಯನ್ನು ಪಡೆದು ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದು ಉತ್ತಮ ಪ್ರಜೆಗಳಾಗಲಿ ಎನ್ನುವುದು ಪತ್ರಿಕೆಯ ಆಶಯ.

ವರದಿ : ಮಂದಾರ ರಾಜೇಶ್ ಭಟ್

LEAVE A REPLY

Please enter your comment!
Please enter your name here