“ವಿಶ್ವ ಗೀತಾ ಪರ್ಯಾಯದಲ್ಲಿ” ಎಲ್ಲ ಭಾಷೆಯ ಲಿಪಿಯಲ್ಲಿ ಭಗವದ್ಗೀತೆಯನ್ನು ಬರೆಯುವ ಸಂಕಲ್ಪ

0
58

ಉಡುಪಿ ಅಷ್ಟಮಠದದಲ್ಲಿ ಒಂದಾದ ಶ್ರೀ ಪುತ್ತಿಗೆ ಮಠದ ಸ್ವಾಮಿಗಳಾದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳು ಶ್ರೀಕೃಷ್ಣ ಸಂದೇಶವನ್ನು ಲೋಕದೊಳಗೆ ಪಸರಿಸುವ ಉದ್ದೇಶದಿಂದ ತಮ್ಮ “ವಿಶ್ವ ಗೀತಾ ಪರ್ಯಾಯದಲ್ಲಿ” ಎಲ್ಲ ಭಾಷೆಯ ಲಿಪಿಯಲ್ಲಿ ಭಗವದ್ಗೀತೆಯನ್ನು ಬರೆಯುವ ಸಂಕಲ್ಪವನ್ನು ಮಾಡಿದ್ದಾರೆ. ಇದರ ಯಜ್ಞದ ಭಾಗವಾಗಿ “ಕೋಟಿ ಗೀತಾ ಲೇಖನ ಯಜ್ಞ” ಎಂದು ಹೆಸರು ನೀಡಿ ಪ್ರಾರಂಭಿಸಿದ್ದಾರೆ.

ಶ್ರೀ ಪುತ್ತಿಗೆ ಮಠದ ಸ್ವಾಮಿಗಳಾದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳ ಆಶೀರ್ವಾದದೊಂದಿಗೆ “ಜೈ ತುಲುನಾಡ್ (ರಿ)” ಸಂಘಟನೆಯು ಉಡುಪಿಯಲ್ಲಿ ನಡೆಯುವ ತುಳು ಲಿಪಿಯ “ಕೋಟಿ ಗೀತಾ ಲೇಖನ ಯಜ್ಞ”ದ ಜವಾಬ್ದಾರಿಯನ್ನು ಹೊತ್ತಿದೆ. ಇದರ ಅಂಗವಾಗಿ ಬರುವ 16.11.2025ನೇ ಭಾನುವಾರ “ತುಲುವೆರೆ ದಂಡ್” ಎಂಬ ದಿಬ್ಬಣವನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ 9:00 ಗಂಟೆಗೆ ಉಡುಪಿ ಜೋಡುಕಟ್ಟೆಯಿಂದ ಆರಂಭವಾಗುವ ದಿಬ್ಬಣ 10:30 ಗಂಟೆಗೆ ಶ್ರೀಕೃಷ್ಣ ಮಠದ ಗೀತಾ ಮಂದಿರದ ಎದುರು ಮುಕ್ತಾಯಗೊಳ್ಳುತ್ತದೆ. ತದ ನಂತರ ಗೀತಾಮಂದಿರದಲಿ ತುಲು ಲಿಪಿಯಲ್ಲಿ ಬರೆದ ಗೀತೆಯ ಪುಸ್ತಕವನ್ನು ಶ್ರೀ ಕೃಷ್ಣ ನಿಗೆ ಅರ್ಪಣೆ ಮಾಡಿ ಎಲ್ಲರೂ ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

200ಕ್ಕೂ ಅಧಿಕ ಮಂದಿ ಭಗವದ್ಗೀತೆ ಪುಸ್ತಕವನ್ನು ತುಳು ಲಿಪಿಯಲ್ಲಿ ಬರೆದಿರುವುದು ಗಮನಾರ್ಹ, ತುಳು ಮಾತ್ರ ಅಲ್ಲದೆ ವಿವಿಧ ಭಾಷೆಗಳಲ್ಲಿ ಭಗವದ್ಗೀತೆಯನ್ನು ಬರೆದು ಉಡುಪಿಯ ಕೃಷ್ಣನಿಗೆ ಅರ್ಪಿಸುವುದೆಂದರೆ ಅಮೋಘ ಕ್ಷಣಗಳಲ್ಲೊಂದು.
ವಿಶೇಷವಾಗಿ ಜೈ‌ ತುಲುನಾಡ್ ಸಂಘಟನೆಯು ಹನ್ನೊಂದು ವರ್ಷಗಳಿಂದ ತುಳು ಭಾಷೆಯ ಏಳಿಗೆಗೆ ತುಳು ಲಿಪಿಯ ಉಳಿವಿಗಾಗಿ ಅನೇಕ ರೀತಿಯ 10 ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಇಂದು ಅನೇಕ ಕಡೆ ತುಳು ಲಿಪಿಯಲ್ಲಿ ದೇವಸ್ಥಾನಗಳ ಹೆಸರುಗಳು, ಬಸ್ಸು ನಿಲ್ದಾಣಗಳ ಹೆಸರುಗಳು, ಇತರ ಅಂಗಡಿ ಮುಂಗಟ್ಟುಗಳ ಹೆಸರುಗಳು ತುಳು ಲಿಪಿಯಲ್ಲಿ ಕಾಣ ಸಿಗುವುದಕ್ಕೆ ಪ್ರೇರಣಾ ಶಕ್ತಿ ಜೈ ತುಲುನಾಡ್ ಸಂಸ್ಥೆ ಎನ್ನಬಹುದು.
ಜೈತುಳುನಾಡ್ ಸಂಘಟನೆಯ ಮುಖ್ಯ ಉದ್ದೇಶವು ತುಳು ಭಾಷೆ ಮತ್ತು ಲಿಪಿಯನ್ನು ಸಂರಕ್ಷಿಸುವುದಾಗಿದೆ.
ನಾವು 300ಕ್ಕೂ ಹೆಚ್ಚು ತುಳು ಲಿಪಿ ಶಿಕ್ಷಕರನ್ನು ತಯಾರಿಸಿದ್ದು, 50,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತುಳು ಲಿಪಿ ಕಲಿಸಿದ್ದೇವೆ.

ಈ ದಿಬ್ಬಣದಲ್ಲಿ ಭಗವದ್ಗೀತೆಯನ್ನು ಬರೆಯುವವರು, ಸಂಘದ ಸದಸ್ಯರು, ತುಳು ಪ್ರೇಮಿಗಳು, ಹಾಗೂ ಒಡಿಪು ಶ್ರೀಕೃಷ್ಣನ ಭಕ್ತರು ಪಾಲ್ಗೊಂಡು ಶ್ರೀಕೃಷ್ಣ ದೇವರ ಅನುಗ್ರಹವನ್ನು ಪಡೆಯುವಂತಾಗಿದೆ.
ಕೃಷ್ಣಂ ವಂದೇ ಜಗದ್ಗುರುಂ

LEAVE A REPLY

Please enter your comment!
Please enter your name here