ಹಾಡು -ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲೇ ಭರ್ಜರಿ ಪ್ರಶಂಶೆ ಪಡೆದ ತೆನ್ಕಾಯಿಮಲೆ ಕಿರುಚಿತ್ರ

0
8

ತೆನ್ಕಾಯಿಮಲೆ ಕನ್ನಡ ಕಿರುಚಿತ್ರದ ಹಾಡು ಮತ್ತು ಟ್ರೈಲರ್ ಪುತ್ತೂರಿನ ಜಿಎಲ್ ಮಾಲ್ ನಲ್ಲಿ ಬಿಡುಗಡೆಗೊಂಡಿತು.

ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ವಿಜಯ ಸಾಮ್ರಾಟ್ ಸ್ಥಾಪಕ ಅಧ್ಯಕ್ಷರಾದ ಸಹಜ್ ರೈ ಬಳ್ಳಜ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಮನ್ಮಥ ಶೆಟ್ಟಿ ಧರ್ಮ ಚಾವಡಿ ಚಿತ್ರದ ನಿರ್ಮಾಪಕರಾದ ಜಗದೀಶ್ ಅಮೀನ್ ನಡುಬೈಲು, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಪುತ್ತೂರು ವಲಯದ ಅಧ್ಯಕ್ಷರಾದ ರಘು ಶೆಟ್ಟಿ, ಸುಶಾಂತ್ ಮರಿಲು , ಹಾಡು ಮತ್ತು ಟ್ರೈಲರನ್ನು ವೀಕ್ಷಿಸಿ ಶುಭ ಹಾರೈಕೆಯನ್ನು ಮಾಡಿದರು. ಈ ಸಂದರ್ಭದಲ್ಲಿ ನೂರಕ್ಕಿಂತಲೂ ಅಧಿಕ ಕಲಾಪ್ರೇಕ್ಷಕರ ಹಾಗು ಚಿತ್ರದ ತಂಡದ ಕಲಾವಿದರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಹಿರಿಯ ಖ್ಯಾತ ನಟರಾದ ದೀಪಕ್ ರೈ ಪಾನಜೆ ಚೇತನ್ ರೈಮಾಣಿ ಚಿತ್ರದ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಅದಾದ ಬಳಿಕ ಚಿತ್ರದ ಕುರಿತಾಗಿ ಚಿತ್ರದ ನಿರ್ದೇಶಕರಾದ ರವಿಚಂದ್ರ ರೈ ಮುಂಡೂರು ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿತ್ರದ ಬಗ್ಗೆ ಎಲ್ಲರಿಂದಲೂ ಭರಪೂರ ಪ್ರಶಂಶೆ ದೊರಕಿತು. ಚಿತ್ರದ ಪ್ರಮುಖ ಕಲಾವಿದ ವಿ.ಜೆ ವಿಖ್ಯಾತ್ ಹಾಗು ಚಿತ್ರದ ನಾಯಕಿ ಶ್ರೇಯಾ ಸುಳ್ಯ ನಿರೂಪಿಸಿದರು .
ಹಾಡು Inspire Films YouTube ಚಾನೆಲ್ನಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here