ಮುಲ್ಕಿ ಮೂಡುಬಿದರೆ ಮಂಡಲದ ವತಿಯಿಂದ ಅಗಲಿದ ಪಡುಮಾರ್ನಾಡು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿದ್ದ ದಿವಂಗತ ಶ್ರೀನಾಥ್ ಸುವರ್ಣ ಅವರ ಶ್ರದ್ಧಾಂಜಲಿ ಸಭೆ ಬನ್ನಡ್ಕ ರಾಘವೇಂದ್ರ ಮಠದ ಸಭಾಂಗಣದಲ್ಲಿ ನೆರವೇರಿತು. ಅಗಲಿದ ಶ್ರೀನಾಥ್ ಸುವರ್ಣ ಅವರ ಉತ್ತಮ ಕಾರ್ಯಗಳನ್ನು, ಅಭಿವೃದ್ಧಿಪರ ಕೆಲಸಗಳನ್ನು ಮುಕ್ತ ಕಂಠದಿಂದ ಶಾಸಕ ಉಮಾನಾಥ ಕೋಟ್ಯಾನ್, ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ನಾಯಕರುಗಳಾದ ದಯಾನಂದ ಪೈ, ಭಾಸ್ಕರ ಆಚಾರ್ಯ, ಸೋಮನಾಥ ಕೋಟ್ಯಾನ್ ಹಾಗೂ ಇತರರು ನೆನಪಿಸಿಕೊಂಡರು. ಸೇರಿದ ಎಲ್ಲರೂ ಅಗಲಿದ ದಿವ್ಯ ಆತ್ಮಕ್ಕೆ ಶ್ರದ್ಧಾಂಜಲಿಯನ್ನು ಸಮರ್ಪಿಸಿದರು.
ವರದಿ ರಾಯಿ ರಾಜ ಕುಮಾರ

