ಮಾನವನ ಜೀವನದಲ್ಲಿ ಕೆಲವರಿಗೆ ಮಧುಮೇಹ ಸರ್ವೆ ಸಾಮಾನ್ಯ ಅದಕ್ಕಾಗಿ ಭಯ ಪಡಬೇಕಾಗಿಲ್ಲ ಮಾನಸಿಕವಾಗಿ ಈ ಸಕ್ಕರೆ ಕಾಯಿಲೆ ಬಗ್ಗೆ ಚಿಂತೆ ಮಾಡಿದರೆ ಭಯ ಪಟ್ಟರೆ ಮಧುಮೇಹ ಜಾಸ್ತಿಯಾಗುತ್ತದೆ. ಸಿಹಿ ಆಹಾರ, ಮಾಂಸಹಾರ ಬಿಟ್ಟು ಸಾತ್ವಿಕ ಸಸ್ಯ ಆಹಾರದೊಂದಿಗೆ ಸ್ವೀಕರಿಸಿದರೆ ಅರೋಗ್ಯ ಭಾಗ್ಯ ಸುಸಂಪನ್ನಗೊಳ್ಳುತ್ತದೆ ಎಂದು ಬೆಂಗಳೂರಿನ ಖ್ಯಾತ ಅನುಭವಿ ವೈದ್ಯರಾದ ಡಾ|| ಲಕ್ಷಿö್ಮÃನಾರಾಯಣರವರು ತಮ್ಮ ಮನದಾಳದ ಮಾತು ಹಂಚಿಕೊAಡರು.
ದಾವಣಗೆರೆಯ ಜಯದೇವ ವೃತ್ತದಲ್ಲಿರುವ ಶಿವಯೋಗಿ ಮಂದಿರದ ಒಳಾಂಗಣದ ಶ್ರೀ ಜಗದ್ಗುರು ಜಯದೇವ ಸಾಂಸ್ಕೃತಿಕ ಭವನದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಆಶ್ರಯದಲ್ಲಿ ಇತ್ತೀಚಿಗೆ ನಡೆದ ಮಧುಮೇಹ ಕಾರ್ಯಾಗಾರದಲ್ಲಿ ಆವರು ಮಾತನಾಡಿದರು.
ಈ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾಶರಣರು ಮಾತನಾಡಿ, ಮಧುಮೇಹ ಮುಕ್ತ ಜೀವನಕ್ಕೆ ದಾವಣಗೆರೆಯಲ್ಲಿ ಮೊಟ್ಟ ಮೊದಲು ಈ ಕಾರ್ಯಾಗಾರ ನಡೆದಿದ್ದು ಮಧುಮೇಹ ಕಾಯಿಲೆಯಿಂದ ಬಳಲುವವರಿಗೆ ಈ ಜಾಗೃತಿ ಅಭಿಯಾನ ನಡೆದಿದ್ದು ಶ್ಲಾಘನೀಯ. ವಿನೂತನ ಪ್ರಯೋಜನಕಾರಿ ಚಿಂತನೆ ಮತ್ತು ಸಂದರ್ಶನ ವೈದ್ಯರಾದ ಡಾ|| ಲಕ್ಷಿö್ಮÃನಾರಾಯಣರೊಂದಿಗೆ ಸಾರ್ವಜನಿಕರು ವಿಚಾರ ವಿನಿಮಯ ಮಾಡಿದ್ದು ಒಂದು ಒಳ್ಳೆಯ ಕಾಯಕ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ|| ಶಾರದಾ, ಡಾ|| ಕುಮಾರ್‌ರವರು ಸಕ್ಕರೆ ಕಾಯಿಲೆ ಬಗ್ಗೆ ಉಪನ್ಯಾಸ ನೀಡಿದರು. ದಾವಣಗೆರೆಯ ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಎಲ್ಲರಿಗೂ ಆಶೀರ್ವಾದ ಮಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾರಂಭದಲ್ಲಿ ಸ್ವಾಗತ ಮಾಡಿ ಅಚ್ಚುಕಟ್ಟಾಗಿ ನಿರೂಪಣೆ, ಮಾಡಿ ಸಕ್ಕರೆ ಕಾಯಿಲೆ ಬಗ್ಗೆ ಕೆಲವು ಮಾಹಿತಿ ಕೊಟ್ಟು ಕೊನೆಗೆ ವಂದಿಸಿದರು.

