ಪಿಸ್ತೂಲ್ ತೋರಿಸಿ ಜ್ಯುವೆಲ್ಲರ್ಸ್‌ಗೆ ನುಗ್ಗಿ ಚಿನ್ನಾಭರಣ ದೋಚಿದ ಕಳ್ಳರು!

0
76

ನೆಲಮಂಗಲ: ನಿನ್ನೆ ರಾತ್ರಿ ಸುಮಾರು 9ಗಂಟೆಯ ಸಮಯದಲ್ಲಿ ಮಾಗಡಿ ರಸ್ತೆ, ಮಾಚೋಹಳಿ ಗೇಟ್ ಹತ್ತಿರವಿರುವ ರಾಮ್ ಜ್ಯೂಯೆಲ್ಲರಿಗೆ ನುಗ್ಗಿದ ದರೋಡೆಕೋರರು ಅಂಗಡಿಯಲ್ಲಿದ್ದ ಮಾಲೀಕ ಕನ್ಹಯ್ಯಲಾಲ್ ಮತ್ತು ಸೇಲ್ಸ್​ಮನ್​ನನ್ನು ಹೆದರಿಸಿ ಕೈಗೆ ಸಿಕ್ಕ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಅಂಗಡಿಯಲ್ಲಿ ಅಳವಡಿಲಾಗಿರುವ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಕನ್ಹಯ್ಯಲಾಲ್ ಅವರ ಕೂಗಾಟ ಕೇಳಿ ಅಕ್ಕಪಕ್ಕದ ಅಂಗಡಿಯವರು ಅಲ್ಲಿಗೆ ಬರುವ ಮೊದಲೇ ಕಳ್ಳರು ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ. ಪಕ್ಕದ ಅಂಗಡಿಯಾತನೊಬ್ಬನನ್ನು ಕಳ್ಳರು ದೂಡಿಕೊಂಡು ಪರಾರಿಯಾಗುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.

LEAVE A REPLY

Please enter your comment!
Please enter your name here