ಮುಲ್ಕಿ : ತಾಲೂಕು ವ್ಯಾಪ್ತಿಯ ಪಡುಪಣಂಬೂರು ತೋಕೂರು ಎಸ್ಕೋಡಿ ಕಿನ್ನಿಗೋಳಿ ಸಂಪರ್ಕ ರಸ್ತೆಯ ಕಂಬಳಬೆಟ್ಟು ಬಳಿ ರಸ್ತೆ ಅವ್ಯವಸ್ಥೆಗಳ ಆಗರವಾಗಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಲೋಕೋಪಯೋಗಿ ಇಲಾಖೆಗೆ ಸೇರಿದ ಗ್ರಾಮೀಣ ಭಾಗದ ಈ ರಸ್ತೆ ಭಾರವಾದ ವಾಹನಗಳು ಎಗ್ಗಿಲ್ಲದೆ ಚಲಿಸಿ ಚಿಂದಿ ಉಡಾಯಿಸಿದೆ. ಕಂಬಳಬೆಟ್ಟು ಬಳಿ ರಸ್ತೆ ಕೆಸರು ಗದ್ದೆಯಂತಾಗಿದ್ದು ತೀರಾ ಇಕ್ಕಟ್ಟಾದ ರಸ್ತೆಯಲ್ಲಿ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ.
ಸಾಮಾಜಿಕ ಕಾರ್ಯಕರ್ತರಾದ ಧರ್ಮಾನಂದ ಶೆಟ್ಟಿಗಾರ್ ಮಾತನಾಡಿ ರಸ್ತೆ ಅಭಿವೃದ್ಧಿ ಬಗ್ಗೆ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದಿದ್ದು ತಾತ್ಕಾಲಿಕ ನೆಲೆಯಲ್ಲಿ ದುರಸ್ತಿ ಮಾಡಿಕೊಳ್ಳುವ ಭರವಸೆ ನೀಡಿದ್ದಾರೆ.
ಸಾವಿರಾರು ವಾಹನಗಳು ಓಡಾಡುವ ಈ ಭಾಗದಲ್ಲಿ ಅನಾಧಿಕಾಲದ ಕಿರು ಸೇತುವೆ ಅಪಾಯದ ಸ್ಥಿತಿಯಲ್ಲಿದೆ ಹಾಗೂ ಕೆಲ ಕಡೆ ರಸ್ತೆ ಕೂಡ ಹೊಂಡಮಯವಾಗಿದ್ದು ಕೂಡಲೇ ಶಾಸಕರು ಎಚ್ಚೆತ್ತು ಸಂಪರ್ಕ ರಸ್ತೆ ದುರಸ್ತಿಗೆ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.