ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವದ ಪ್ರಯುಕ್ತ ದೇವಳಕ್ಕೆ ಸಂಬಂಧ ಪಟ್ಟ ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರು ಬೆಂಕಿಯಾಟ (ತೂಟೆದಾರ) ಸೇವೆ ನಡೆಯಿತು.
ತೂಟೆದಾರ ಕಟೀಲು ದೇವಳದ ಜಾತ್ರಾಮಹೋತ್ಸವದ ಕೊನೆಯ ದಿನ ನಡೆಯುತ್ತಿದ್ದು ವಿಶೇಷ ಮಹತ್ವನ್ನು ಪಡೆದಿದೆ, ದೇವಳಕ್ಕೆ ಸಂಬಂಧ ಪಟ್ಟ ಅತ್ತೂರು ಮತ್ತು ಕೊಡೆತ್ತೂ ಎಂಬ ಎರಡು ಮಾಗಣೆಗೆ ಸಂಬಂಧ ಪಟ್ಟ ಭಕ್ತರು ಎರಡು ಗುಂಪುಗಳಾಗಿ ನಿಂತು ಒಬ್ಬರ ಎರಡು ಉಭಯ ತಂಡಗಳ ಜನರು ಒಬ್ಬರ ಮೇಲೊಬ್ಬರು ಎಸೆಯುವುದು, ದೇವಳದ ಅನತಿ ದೂರದಲ್ಲಿ ನಂದಿನಿ ನದಿಯಲ್ಲಿ ದೇವರ ಜಳಕವಾದ ನಂತರ ಸಮೀಪದ ರಕೇಶ್ವರೀ ಸನ್ನಿಧಿ ಬಳಿ ತೂಟೆದಾರ ನಡೆಯುತ್ತದೆ ಇಲ್ಲಿ ಮೂರು ಸುತ್ತು ನಡೆದ ನಂತರ ದೇವಳದ ರಥಬೀದಿಗೆ ಬಂದು ಅಲ್ಲಿ ಮೂರು ಸುತ್ತು ತೂಟೆದಾರ ಸೇವೆ ನಡೆಯುತ್ತದೆ.
ಈ ಸಂದರ್ಭ ಅತಿರೇಖಕ್ಕೆ ಹೋಗದಂತೆ ಊರಿನ ಪ್ರಮುಖರು ತಡೆಯುತ್ತಾರೆ, ತೂಟೆದಾರದಲ್ಲಿ ಭಾಗವಹಿಸಿದ ಯಾವುದೇ ಸದಸ್ಯನಿಗೆ ಯಾವ ತರದ ಗಾಯಗಳಾಗುವುದಿಲ್ಲ ಒಂದು ವೇಳೆ ಗಾಯವಾದರೆ ಕಟೀಲು ದುರ್ಗೆಯ ಪ್ರಸಾದವೇ ಇದಕ್ಕೆ ಚೌಷದಿಯಾಗಿದೆ. ಈ ಸಂಪ್ರದಾಯ ಪ್ರತೀ ವರ್ಷ ನಡೆಯುವುದು ಇಲ್ಲಿನ ವಿಶೇಷ.