ಮೂಡುಬಿದಿರೆ: ಕಳೆದ ಹಲವಾರು ವರ್ಷಗಳಿಂದ ಮೂಡುಬಿದಿರೆಯಲ್ಲಿ ಪ್ರಖ್ಯಾತವಾಗಿರುವ ಪ್ರಭಾತ್ ಸಿಲ್ಕ್ಸ್ ವಿಸ್ಕೃತ ಮಳಿಗೆಯಲ್ಲಿ ಇದೀಗ ಟೈಟನ್ ವಾಚ್ ಕಂಪನಿಯವರ ವಿಶೇಷ ಮೂರು ಬ್ರಾಂಡ್ ಗಳ ಮಾರಾಟ ಮಳಿಗೆ ಉದ್ಘಾಟನೆಗೊಂಡಿದೆ. ಉದ್ಘಾಟನೆಯನ್ನು ದೀಪ ಬೆಳಗಿ, ಟೇಪ್ ಕತ್ತರಿಸಿ ನ್ಯೂ ಪಡಿವಾಳ್ ಸಹ ಮಾಲೀಕ ಮಿಥುನ್ ಅವರು ನೆರವೇರಿಸಿ ಶುಭ ಹಾರೈಸಿದರು.

ಟಾಟಾ ವಾಚ್ ನವರ ಫಾಸ್ಟ್ ಟ್ರಾಕ್, ಸೋನಾಟ, ಟೈಟನ್ ಇತ್ಯಾದಿಗಳ ಸಂಪೂರ್ಣ ನೂತನ ವಾಚ್ ಗಳು ಇಲ್ಲಿ ಲಭ್ಯವಿದೆ.
ಅಲ್ಲದೆ ಟೈಮೆಕ್ಸ್ ಅವರ ವಾಚುಗಳು ಲಭ್ಯವಿವೆ. ಇಡೀ ಮೂಡುಬಿದಿರೆಯಲ್ಲಿ ಪ್ರಪ್ರಥಮವಾಗಿ ವಿಸ್ತೃತ ಬಟ್ಟೆಯ ಶೋರೂಮ್ ಹೊಂದಿರುವ ಇಲ್ಲಿ ಮಕ್ಕಳು, ಹೆಂಗಸರು, ಗಂಡಸರು ಎಲ್ಲರಿಗೂ ಬೇಕಾಗುವ ರೀತಿಯ ವಸ್ತ್ರ ವಿನ್ಯಾಸಗಳು ಲಭ್ಯವಿರುತ್ತವೆ. ಮೊದಲ ಮಹಡಿಯಲ್ಲಿ ಸೀರೆಯ ವೈವಿಧ್ಯಮಯವಾದ ಸಂಗ್ರಹ, ಮದುವೆಯ ಸಂದರ್ಭದಲ್ಲಿ ಬೇಕಾಗುವ ಎಲ್ಲ ರೀತಿಯ ವಿಶೇಷ ಸೀರೆ-ಧೋತಿಗಳು, ಸಲ್ವಾರ್ ಗೌನ್ಗಳು, ಪೇಟ ಬಾಸಿಂಗ ಇತ್ಯಾದಿಗಳು, ದೊರೆಯುತ್ತಿದೆ.

ಎರಡನೇ ಮಹಡಿಯಲ್ಲಿ ಸುಮಾರು 12ಕ್ಕೂ ಹೆಚ್ಚು ವಿವಿಧ ಕಂಪನಿಗಳ ಪುರುಷರ ವೈವಿಧ್ಯಮಯ ಉಡುಗೆ ತೊಡುಗೆಗಳು, ಮದುವೆಯ ಸಂದರ್ಭದ ವಿಶೇಷವಾದ ಮೇಲುಡುಗೆಗಳೂ ಲಭ್ಯವಿದೆ. ಎಲ್ಲವನ್ನು ಒಂದೇ ಸೂರಿನ ಅಡಿ ಒದಗಿಸುವ ಪ್ರಯತ್ನವನ್ನು ಪ್ರಭಾತ್ ಸಿಲ್ಕ್ ನ ಮಾಲಿಕ ಪ್ರಭಾ ಚಂದ್ರ ಜೈನ್, ಪೂರ್ಣಚಂದ್ರ ಜೈನ್, ಪ್ರತಾಪ್ ಜೈನ್, ಮೆನೇಜರ್ ಸಂಪತ್ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಟೈಟನ್ ವಾಚನ ಸೇಲ್ಸ್ ವಿಭಾಗದ ಪವನ್, ಶಿವಪ್ರಸಾದ್ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ
.