ತೋಕೂರು: ಇಂದು ಗುಡ್ಡಗಾಡು ಓಟ ಸ್ಪರ್ಧೆ ವಿಶೇಷ ಕ್ರೀಡಾ ಕಾರ್ಯಕ್ರಮ

0
117

ತೋಕೂರು: ಡಾ. ಎಂ. ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್ ಹಾಗೂ ಅಸೋಸಿಯೇಷನ್ ಆಫ್ ICSE & CBSE ಸ್ಕೂಲ್ಸ್ ಆಫ್ ಉಡುಪಿ & ದಕ್ಷಿಣಕನ್ನಡ ಡಿಸ್ಟ್ರಿಕ್ಟ್ (AICS) ಸಹಭಾಗಿತ್ವದಲ್ಲಿ ಆಗಸ್ಟ್ 18, 2025 ರಂದು ಬೆಳಿಗ್ಗೆ 7:45ಕ್ಕೆ ಐಸಿಎಸ್ಇ ಮತ್ತು ಸಿಬಿಎಸ್ಇ ಶಾಲಾ ವಿದ್ಯಾರ್ಥಿಗಳಿಗಾಗಿ ಕ್ರಾಸ್ ಕಂಟ್ರಿ ರೇಸ್ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ 17 ಮತ್ತು 14ರ ವಯೋಮಾನದೊಳಗಿನ ಬಾಲಕ, ಬಾಲಕಿಯರಿಗಾಗಿ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಾಲೆಯ ಪ್ರಾಚಾರ್ಯೆ ಶ್ರೀಲತಾ ರಾವ್ ಹಾಗೂ ಶಾಲಾ ಪಿಟಿಎ ಅಧ್ಯಕ್ಷ ಪುಷ್ಪರಾಜ್ ಚೌಟ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಿನ್ನಿಗೋಳಿ ಸಮೀಪದ ಭಟ್ಟಕೋಡಿಯಿಂದ ನಡುಗೋಡು, ಬಲವಿನಗುಡ್ಡೆ, ಸುರಗಿರಿ, ಪಕ್ಷಿಕೆರೆ ಮಾರ್ಗವಾಗಿ ಶಾಲೆಯ ಆವರಣದೊಳಗೆ ಸಮಾಪ್ತಿಯಾಗುವ ಸುಮಾರು ಆರು ಕಿ. ಮೀ ಓಟದ ಸ್ಪರ್ಧೆಯ ಸಮಾರೋಪ ಬೆಳಿಗ್ಗೆ 10 ಗಂಟೆಗೆ ಎಸ್ ಕೋಡಿಯ ಪದ್ಮಾವತಿ ಲಾನ್‌ನಲ್ಲಿ ನಡೆಯಲಿದೆ. ಸಮಾರಂಭದ ಮುಖ್ಯ ಅತಿಥಿಯಾಗಿ ಮಂಗಳೂರು ಉತ್ತರ ಟ್ರಾಫಿಕ್ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಅವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿದ್ಯಾಸಂಸ್ಥೆಯ ನಿರ್ದೇಶಕರಾದಯೋಗೀಶ್ ಹೆಗ್ಡೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here