ಬಿಡ್ಕಿನ್‌ನಲ್ಲಿಸರ್ಕಾರಿಶಾಲೆಯಮೂಲಸೌಕರ್ಯಅಭಿವೃದ್ಧಿಗೆಮಹಾರಾಷ್ಟ್ರಸರ್ಕಾರದಜೊತೆಗೆಒಡಂಬಡಿಕೆಗೆಸಹಿಹಾಕಿದಟೊಯೋಟಾಕಿರ್ಲೋಸ್ಕರ್ಮೋಟಾರ್

0
7

: ಸಮಾಜದ ಉನ್ನತಿಗೆ ಕಾರ್ಯನಿರ್ವಹಿಸುವ ವಿಚಾರದಲ್ಲಿ ಸದಾ ಬದ್ಧತೆ ತೋರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಛತ್ರಪತಿ ಸಂಭಾಜಿ ನಗರದ ಬಿಡ್ಕಿನ್‌ನ ಜಿಲ್ಲಾ ಪರಿಷತ್ ಕೇಂದ್ರೀಯ ಪ್ರಾಥಮಿಕ ಶಾಲೆಯ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ನೆರವು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಪರಿಷತ್‌ ಜೊತೆಗೆ ಒಡಂಬಡಿಕೆಗೆ ಸಹಿ ಹಾಕಿದೆ.

ಒಡಂಬಡಿಕೆ ವಿನಿಮಯ ಸಮಾರಂಭವು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದು, ಛತ್ರಪತಿ ಸಂಭಾಜಿ ನಗರದ ಜಿಲ್ಲಾಧಿಕಾರಿ ಶ್ರೀ ದೀಲಿಪ್ ಸ್ವಾಮಿ, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಶ್ರೀ ಅಂಕಿತ್  ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.ಟಿಕೆಎಂ ಪರವಾಗಿ ಟಿಕೆಎಂನ ಮುಖ್ಯ ಸಂವಹನ ಅಧಿಕಾರಿ, ಹಿರಿಯ ಉಪಾಧ್ಯಕ್ಷ ಮತ್ತು ರಾಜ್ಯ ವ್ಯವಹಾರಗಳ ಮುಖ್ಯಸ್ಥರಾದ ಶ್ರೀ ಸುದೀಪ್ ದಳವಿ ಹಾಗೂ ಕಂಪನಿಯ ಹಿರಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಟಿಕೆಎಂ ಸಂಸ್ಥೆಯು ಮಹಾರಾಷ್ಟ್ರದಲ್ಲಿ ಹೊಸ ಗ್ರೀನ್‌ಫೀಲ್ಡ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಯೋಜಿಸಿದ್ದು, ಆ ಪ್ರಕಾರವಾಗಿ ಕಾರ್ಯನಿರ್ವಹಿಸುತ್ತಿದೆ. ಆ ಹಿನ್ನೆಲೆಯಲ್ಲಿ ಸ್ಥಳೀಯ ಪ್ರದೇಶದ ಉನ್ನತಿಗೆ ದುಡಿಯುವ ಸಂಸ್ಥೆಯ ಉದ್ದೇಶದ ಭಾಗವಾಗಿ ಬಿಡ್ಕಿನ್ ಶಾಲಾಭಿವೃದ್ಧಿಗೆ ಮುಂದಾಗಿದೆ.

ಟೊಯೋಟಾದ ಸಿಎಸ್ಆರ್ ಸಿದ್ಧಾಂತದ ಕೇಂದ್ರಬಿಂದು ಶಿಕ್ಷಣ

ಶಿಕ್ಷಣವು ಟಿಕೆಎಂನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ತಂತ್ರದ ಕೇಂದ್ರಬಿಂದುವಾಗಿದೆ. ಸಂಸ್ಥೆಯು ಕಲಿಕೆಯ ಮೂಲಕ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವುದು ಸಾಮಾಜಿಕ ಪ್ರಗತಿ ಸಾಧಿಸಲು ಅತ್ಯಗತ್ಯ ಎಂಬ ನಂಬಿಕೆಯನ್ನು ಹೊಂದಿದೆ. ಭಾರತದಂತಹ ಜನಸಂಖ್ಯೆ ಹೆಚ್ಚಿರುವ ಮತ್ತು ಆರ್ಥಿಕ ವೈವಿಧ್ಯಮಯ ದೇಶದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವುದು ಸಾಮಾಜಿಕ, ಆರ್ಥಿಕ ಮತ್ತು ಬೌದ್ಧಿಕ ಕ್ಷೇತ್ರಗಳಲ್ಲಿ ಉನ್ನತಿ ಸಾಧಿಸಲು ಬಹಳ ಅಗತ್ಯವಾಗಿದೆ. ಹಾಗಾಗಿ ಟಿಕೆಎಂ ಸಂಸ್ಥೆಯು ಸ್ಕಿಲ್ ಇಂಡಿಯಾ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯಂತಹ ರಾಷ್ಟ್ರೀಯ ಯೋಜನೆಗಳಿಗೆ ಪೂರಕವಾಗಿ ಶೈಕ್ಷಣಿಕ ಯೋಜನೆಗಳನ್ನು ನಡೆಸುತ್ತಿದೆ.

ಮಕ್ಕಳ ಆರೈಕೆ, ಸಾಕ್ಷರತೆ, ಶಾಲಾ ಮೂಲಸೌಕರ್ಯ ಅಭಿವೃದ್ಧಿ ಮತ್ತು ಅಗತ್ಯ ಕಲಿಕಾ ಸಂಪನ್ಮೂಲ ವಿತರಣೆ ಮುಂತಾದ ಯೋಜನೆಗಳಿಗೆ ಗಮನ ಕೇಂದ್ರೀಕರಿಸಿರುವ ಟಿಕೆಎಂ ಆ ಮೂಲಕ ಶಿಕ್ಷಣ ಸವಾಲುಗಳನ್ನು ಎದುರಿಸಲು ಮತ್ತು ಅತ್ಯುತ್ತಮ ಕಲಿಕಾ ವಾತಾವರಣವನ್ನು ರೂಪಿಸಲು ಪ್ರಯತ್ನಿಸುತ್ತದೆ. ಈ ವಿಧಾನವು ಟೊಯೋಟಾದ ಮಕ್ಕಳಿಂದ ಸಮಾಜಕ್ಕೆ ಮಾಡೆಲ್ ಅನ್ನು ಪ್ರತಿಬಿಂಬಿಸುತ್ತಿದ್ದು, ಈ ಮಾಡೆಲ್ ಮೂಲಕ ಸಂಸ್ಥೆಯು ಮಕ್ಕಳ ಶಿಕ್ಷಣದಲ್ಲಿ ಹೂಡಿಕೆ ಮಾಡಿ ಸಾಮಾಜಿಕ ರೂಪಾಂತರವನ್ನು ಉಂಟುಮಾಡುತ್ತದೆ. ಈ ಮೂಲಕ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಅವರ ಕುಟುಂಬಗಳು ಮತ್ತು ಸಮಾಜಕ್ಕೂ ಪ್ರಯೋಜನವನ್ನು ಒದಗಿಸುತ್ತದೆ. ಟೊಯೋಟಾದ “ಸಮುದಾಯ ವಿಕಾಸ” ಎಂಬ ಪರಿಕಲ್ಪನೆಯಲ್ಲಿ ಈ ಯೋಜನೆಗಳು ನಡೆಯುತ್ತಿದ್ದು, ಸರ್ವತೋಮುಖ ಸಮುದಾಯ ಅಭಿವೃದ್ಧಿಯ ಅಗತ್ಯತೆ ಸಾರುತ್ತವೆ.

ಝಡ್ ಪಿ ಕೆಪಿಎಸ್ ಬಿಡ್ಕಿನ್ಒಂದು ಶತಮಾನ ಪ್ರಾಯದ ಶಾಲೆ

ಬಿಡ್ಕಿನ್ ನ ಜಿಲ್ಲಾ ಪರಿಷತ್ ಕೇಂದ್ರೀಯ ಪ್ರಾಥಮಿಕ ಶಾಲೆಯು ಒಂದು 100 ವರ್ಷಗಳ ಹಳೆಯ ಸಂಸ್ಥೆಯಾಗಿದ್ದು, ಆರ್ಥಿಕವಾಗಿ ಹಿಂದುಳಿದ, ವಿವಿಧ ಸಮುದಾಯಗಳ ಮಕ್ಕಳಿಗೆ ಶಿಕ್ಷಣ ಒದಗಿಸುತ್ತದೆ. ಇದು ವಿದ್ಯಾರ್ಥಿಗಳ ಸಂಖ್ಯೆಯ ದೃಷ್ಟಿಯಿಂದ ಈ ಪ್ರದೇಶದ ಅತಿದೊಡ್ಡ ಸರ್ಕಾರಿ ಶಾಲೆಗಳಲ್ಲಿ ಒಂದಾಗಿದ್ದು, ಇದು ಪ್ರಸ್ತುತ 800ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಸುಮಾರು 1,200 ವಿದ್ಯಾರ್ಥಿಗಳಿಗೆ ದಾಖಲಾತಿಯು ಏರಿಕೆಯಾಗುವ ನಿರೀಕ್ಷೆಯಿದೆ. ಅತ್ಯುತ್ತಮ ಕಲಿಕಾ ವಾತಾವರಣ ರೂಪಿಸಲು ಶಾಲಾ ಮೂಲಸೌಕರ್ಯ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಅಭಿವೃದ್ಧಿ ಮಾಡುವ ತುರ್ತು ಅಗತ್ಯವಿದೆ.

ಟಿಕೆಎಂನ ಯೋಜನೆಯು ಬಿಡ್ಕಿನ್ ನ ಜಿಲ್ಲಾ ಪರಿಷತ್ ಕೇಂದ್ರೀಯ ಪ್ರಾಥಮಿಕ ಶಾಲೆಯನ್ನು ಆಧುನಿಕ, ಒಳಗೊಳ್ಳುವ ಮತ್ತು ಭವಿಷ್ಯ ಸಿದ್ಧ ಕಲಿಕಾ ವಾತಾವರಣವನ್ನಾಗಿ ರೂಪಾಂತರಿಸಲು ಪ್ರಯತ್ನಿಸುತ್ತದೆ. ಈ ಅಭಿವೃದ್ಧಿ ಕಾರ್ಯವು 2025 ರಿಂದ 2028 ರವರೆಗೆ ಮೂರು ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ಕಾರ್ಯಗತಗೊಳ್ಳಲಿದೆ.

 ಸಂದರ್ಭದಲ್ಲಿ ಉಪಸ್ಥಿತರಿದ್ದ ಛತ್ರಪತಿ ಸಂಭಾಜಿನಗರದ ಕಲೆಕ್ಟರ್ ಮತ್ತು ಜಿಲ್ಲಾಧಿಕಾರಿ ಶ್ರೀ ದೀಲಿಪ್ ಸ್ವಾಮಿ ಅವರು ಮಾತನಾಡಿ“ಬಿಡ್ಕಿನ್ ನ ಜಿಲ್ಲಾ ಪರಿಷತ್ ಕೇಂದ್ರೀಯ ಪ್ರಾಥಮಿಕ ಶಾಲೆಯ ಮೂಲಸೌಕರ್ಯವನ್ನು ಉನ್ನತೀಕರಿಸಲು ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಜೊತೆಗೆ ಸಹಯೋಗ ಮಾಡಿಕೊಂಡಿದ್ದು, ಈ ಯೋಜನೆಯನ್ನು ಆರಂಭಿಸಲು ಸಂತೋಷ ಹೊಂದಿದ್ದೇವೆ. ಈ ಶಾಲೆಯು ಈ ಪ್ರದೇಶದ ಆರ್ಥಿಕವಾಗಿ ಹಿಂದುಳಿದಿರುವ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವ ಪ್ರಮುಖ ಕೇಂದ್ರವಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಗಮನಾರ್ಹವಾಗಿ ಬೆಳೆಯುವ ನಿರೀಕ್ಷೆಯಿರುವ ಈ ಸಂದರ್ಭದಲ್ಲಿ, ಈ ಯೋಜನೆಯು ನಿಜವಾಗಿಯೂ ಮಹತ್ವದ್ದಾಗಿದೆ. ಈ ಯೋಜನೆಯು ಕಲಿಕಾ ವಾತಾವರಣವನ್ನು ಗಣನೀಯವಾಗಿ ವೃದ್ಧಿಸುತ್ತದೆ. ಇಂತಹ ಸಹಯೋಗದ ಪ್ರಯತ್ನಗಳ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದರಿಂದ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜದ ಉನ್ನತಿಗೆ ಟೊಯೋಟಾದ ಸಕ್ರಿಯ ಕೊಡುಗೆಯನ್ನು ನಾವು ಶ್ಲಾಘಿಸುತ್ತೇವೆ ಮತ್ತು ಈ ಯೋಜನೆಯು ಬಿಡ್ಕಿನ್‌ನ ಮಕ್ಕಳಿಗೆ ಉತ್ತಮ ಕೊಡುಗೆ ನೀಡಲಿದೆ ಎಂಬ ವಿಶ್ವಾಸವಿದೆ” ಎಂದರು.

ಟಿಕೆಎಂನ ಮುಖ್ಯ ಸಂವಹನ ಅಧಿಕಾರಿಹಿರಿಯ ಉಪಾಧ್ಯಕ್ಷ ಮತ್ತು ರಾಜ್ಯ ವ್ಯವಹಾರಗಳ ಮುಖ್ಯಸ್ಥರಾದ ಶ್ರೀ ಸುದೀಪ್ ದಳವಿ ಅವರು ಮಾತನಾಡಿ“ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಸಂಸ್ಥೆಯು ಸಾರಿಗೆ ವ್ಯವಸ್ಥೆ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುವುದರ ಜೊತೆಗೆ ಶಿಕ್ಷಣಕ್ಕೂ ನೆರವು ಒದಗಿಸುತ್ತಿದೆ. ಶಿಕ್ಷಣವು ಒಳಗೊಳ್ಳುವ ಅಭಿವೃದ್ಧಿ ಸಾಧಿಸಲು ನೆರವಾಗುವ ಅತ್ಯಂತ ಶಕ್ತಿಶಾಲಿ ಸಾಧನಗಳಲ್ಲಿ ಒಂದು ಎಂಬುದನ್ನು ನಾವು ದೃಢವಾಗಿ ನಂಬುತ್ತೇವೆ. ಸುಮಾರು 1,200 ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕಲಿಕಾ ವಾತಾವರಣವನ್ನು ಸೃಷ್ಟಿಸುವ ಮೂಲಕ, ನಾವು ಮುಂದಿನ ತಲೆಮಾರನ್ನು ಬೆಳೆಸಲು ಹೂಡಿಕೆ ಮಾಡುತ್ತಿದ್ದೇವೆ. ಈ ಒಡಂಬಡಿಕೆಯು ಸರ್ಕಾರಿ ಸಂಸ್ಥೆ ಜೊತೆಗಿನ ನಮ್ಮ ನಿರಂತರ ಸಹಕಾರವನ್ನು ಪ್ರತಿಬಿಂಬಿಸುತ್ತದೆ. ಈ ಯೋಜನೆಯು ರಾಜ್ಯದಲ್ಲಿ ಉತ್ತಮ ಕಾರ್ಯಗಳಲ್ಲಿ ತೊಡಗಿಕೊಳ್ಳುವ ನಮ್ಮ ಉದ್ದೇಶದ ಆರಂಭವಾಗಿದೆ. ಮುಂದೆ ‘ಎಲ್ಲರಿಗೂ ಸಾರಿಗೆ ವ್ಯವಸ್ಥೆ ರೂಪಿಸುವ’ ಜೊತೆಗೆ ಸಮಾಜ ಉನ್ನತಿ ಕಾರ್ಯಗಳಲ್ಲಿಯೂ ತೊಡಗಿಕೊಳ್ಳುವುದಕ್ಕೆ ನಾವು ಬದ್ಧರಾಗಿದ್ದೇವೆ” ಎಂದರು.

ಟಿಕೆಎಂನ ಸಿಎಸ್ಆರ್ ಯೋಜನೆಗಳ ಪರಿಣಾಮ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಸಿಎಸ್ಆರ್ ಯೋಜನೆಗಳು ಸುಸ್ಥಿರ, ಒಳಗೊಳ್ಳುವ ಬೆಳವಣಿಗೆ ಮತ್ತು ಸಮುದಾಯ ಸಬಲೀಕರಣದ ಮೇಲೆ ಸ್ಥಿರವಾಗಿ ಗಮನ ಕೇಂದ್ರೀಕರಿಸಿವೆ. ಮಾರ್ಚ್ 31, 2025 ರ ಪ್ರಕಾರ ಕಂಪನಿಯ ಸಿಎಸ್ಆರ್ ಯೋಜನೆಗಳು ದೇಶಾದ್ಯಂತ 42.46 ಲಕ್ಷಕ್ಕೂ ಹೆಚ್ಚು ಜನರ ಜೀವನದ ಮೇಲೆ (42,46,246) ಸಕಾರಾತ್ಮಕ ಪರಿಣಾಮ ಬೀರಿವೆ. 2024–25ನೇ ಆರ್ಥಿಕ ವರ್ಷದಲ್ಲಿ ಮಾತ್ರ, ಕಂಪನಿಯು ತನ್ನ ಆರು ಪ್ರಮುಖ ಸಿಎಸ್ಆರ್ ಮೂಲಾಧಾರಗಳಾದ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ, ಪರಿಸರ, ಕೌಶಲ್ಯ ಅಭಿವೃದ್ಧಿ, ರಸ್ತೆ ಸುರಕ್ಷತೆ

LEAVE A REPLY

Please enter your comment!
Please enter your name here