ಕಲ್ಲಬೆಟ್ಟು ಶಾಲೆಯಲ್ಲಿ ವ್ಯಾಪಾರ ಮೇಳ

0
10


ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ತಾಲೂಕಿನ ಕಲ್ಲಬೆಟ್ಟು ಪಿಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆಬ್ರವರಿ 14ರಂದು ವ್ಯಾಪಾರ ಮೇಳ ವಿದ್ಯಾರ್ಥಿಗಳಿಂದ ನಡೆಯಿತು. ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ, ಸ್ವತಂತ್ರ ಉದ್ಯಮದ ಸ್ವಾವಲಂಬಿ ಜೀವನ ನಡೆಸಬೇಕಾಗುವ ದೃಡತೆಯನ್ನು ಬೆಳೆಸುವುದು ಮುಖ್ಯ ಉದ್ದೇಶವಾಗಿತ್ತು. ಶಾಲೆ ಹಾಗು ಮನೆಯಲ್ಲಿ ಬೆಳೆಸಿದ ಉತ್ಪನ್ನಗಳನ್ನು ವಿದ್ಯಾರ್ಥಿಗಳು ಶಾಲೆಯ ಜಗಲಿಯಲ್ಲಿ ಸ್ಟಾಲುಗಳನ್ನು ಇಟ್ಟು ಮಾರಾಟ ಮಾಡಿದರು.


ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಂದರ, ಉಪಾಧ್ಯಕ್ಷೆ ಗಾಯತ್ರಿ, ಸದಸ್ಯ ಸುಧಾ, ಮುಖ್ಯ ಶಿಕ್ಷಕಿ ನಿಶಾ, ವಾರ್ಡ್ ಸದಸ್ಯ ಜೊಸ್ಸಿ ಮಿನೆಜಸ್, ಸಿಆರ್‌ಪಿ ಮಹೇಶ್ವರಿ, ಶಿಕ್ಷಕಿಯರು ಹಾಜರಿದ್ದರು. ಮಹಮ್ಮದ್ ಬಶೀರ್ ಸ್ವಾಗತಿಸಿದರು. ಪೂಜಾ ಕಾರ್ಯಕ್ರಮ ನಿರ್ವಹಿಸಿದ್ದರು. ತಿಲಕ್ ಚಂದ್ರ ವಂದಿಸಿದರು.

LEAVE A REPLY

Please enter your comment!
Please enter your name here