ನಾಪತ್ತೆಯಾದ ಶ್ರೀನಂದ ದುರಂತ ಅಂತ್ಯ : 2500 ಅಡಿ ಕೆಳಗೆ ಶವವಾಗಿ ಪತ್ತೆ!

0
106

ಚಿಕ್ಕಮಗಳೂರು : ಕಳೆದ ನಾಲ್ಕು ದಿನಗಳಿಂದ ಚಿಕ್ಕಮಂಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಮಾಣಿಕ್ಯಧಾರಾಧಲ್ಲಿ ನಾಪತ್ತೆಯಾಗಿದ್ದ ಬಾಲಕಿ 14 ವರ್ಷದ ಶ್ರೀನಂದ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ನಾಲ್ಕು ದಿನಗಳಿಂದ ಶ್ರೀನಂದಗಾಗಿ ಬಹಳ ಹುಡುಕಾಟ ನಡೆಸಿದ್ದರು.

ಚಿಕ್ಕಮಂಗಳೂರು ತಾಲೂಕಿನ ಶೋಲಾ ಪ್ರದೇಶದಲ್ಲಿ ನಾಪತ್ತೆಯಾಗಿದ್ದಳು. ಈಕೆ ಕೂಡ ಕೇರಳ ಮೂಲದ ಬಾಲಕಿಯಾಗಿದ್ದಳು. ಇದಕ್ಕೂ ಮೊದಲು ಕೇರಳ ಮೂಲದ ಯುವತಿ ಮೂರು ದಿವಸ ನಾಪತ್ತೆಯಾಗಿ ಆನಂತರ ಸಿಕ್ಕಿದ್ದಳು.

ಆದರೆ ಶ್ರೀ ನಂದ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ಮಾಣಿಕ್ಯ ದಾರಾದ 2000 ಅಡಿ ಕೆಳಗಡೆ ಆಕೆಯ ಮೃತ ದೇಹ ಪತ್ತೆಯಾಗಿದೆ. ಬಹುಶಃ ಕಾಲು ಜಾರಿ ನೀರಿನಿಂದ ಕೆಳಗೆ ಬಿದ್ದಿದ್ದಳಾ ಅಥವಾ ಹೇಗೆ ಕೆಳಗೆ ಬಿದ್ದಿದ್ದಾಳೆ ಎನ್ನುವುದರ ಕುರಿತು ಅನುಮಾನ ವ್ಯಕ್ತವಾಗಿದ್ದು ಈ ಕುರಿತು ಇನ್ನು ತನಿಖೆಯ ನಂತರ ಕಾರಣ ಬಯಲಾಗಲಿದೆ.

LEAVE A REPLY

Please enter your comment!
Please enter your name here