ಟ್ರೈನ್ ಟಿಕೆಟ್ ಬೆಲೆ ಪ್ರತೀ ಕಿಮೀಗೆ 1-2 ಪೈಸೆ ಹೆಚ್ಚಳ; ಡಿ. 26ರಿಂದ ಹೊಸ ದರ ಜಾರಿ

0
42

ನವದೆಹಲಿ: ರೈಲು ಪ್ರಯಾಣ ಮುಂದಿನ ದಿನಗಳಲ್ಲಿ ತುಸು ದುಬಾರಿಯಾಗಲಿದೆ. ರೈಲು ಪ್ರಯಾಣ ಟಿಕೆಟ್ ದರಗಳಲ್ಲಿ ಅಲ್ಪ ಏರಿಕೆ ಮಾಡಲು ಭಾರತೀಯ ರೈಲ್ವೇಸ್ ನಿರ್ಧರಿಸಿದೆ. ದೂರ ಪ್ರಯಾಣದ ದರಗಳನ್ನು ಏರಿಕೆ ಮಾಡಲಾಗುತ್ತಿದೆ. ಸಬರ್ಬನ್ ರೈಲುಗಳ ದರಗಳಲ್ಲಿ ಬದಲಾವಣೆ ಇರುವುದಿಲ್ಲ. ಡಿಸೆಂಬರ್ 26ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.

ವರದಿ ಪ್ರಕಾರ 215 ಕಿಮೀ ದೂರದವರೆಗಿನ ಜನರಲ್ ಕ್ಲಾಸ್ ಕಂಪಾರ್ಟ್ಮೆಂಟ್​ಗಳ ಟಿಕೆಟ್ ಬೆಲೆಗಳಲ್ಲಿ ಬದಲಾವಣೆ ಇರುವುದಿಲ್ಲ. ಅದಕ್ಕೂ ಹೆಚ್ಚಿನ ದೂರದ ಪ್ರಯಾಣವಾದರೆ, 215 ಕಿಮೀ ಮೇಲ್ಪಟ್ಟಿರುವ ಪ್ರತೀ ಒಂದು ಕಿಮೀಗೆ ಒಂದು ಪೈಸೆಯಷ್ಟು ದರ ಏರಿಕೆ ಆಗಲಿದೆ. ಅಂದರೆ ಪ್ರತೀ ನೂರು ಕಿಮೀ ಹೆಚ್ಚುವರಿ ದೂರಕ್ಕೆ ಒಂದು ರೂನಷ್ಟು ಬೆಲೆ ಏರಿಕೆ ಆಗಲಿದೆ. ಇದು ಜನರಲ್ ಕ್ಲಾಸ್ ಟಿಕೆಟ್​ಗಳಿಗೆ ಮಾಡಲಾಗಿರುವ ಏರಿಕೆ.

ಇನ್ನು, ಎಸಿ ಕೋಚ್​ಗಳಿಗೆ ಟಿಕೆಟ್ ದರ ಪ್ರತೀ ಕಿಮೀಗೆ ಎರಡು ಪೈಸೆಯಷ್ಟು ಏರಿಕೆ ಮಾಡಲಾಗಿದೆ. ಮೇಲ್ ಟ್ರೇನ್​ಗಳು ಅಥವಾ ಎಕ್ಸ್​ಪ್ರೆಸ್ ಟ್ರೈನುಗಳಲ್ಲಿನ ನಾನ್ ಎಸಿ ಕೋಚ್​ಗಳಿಗೂ ಟಿಕೆಟ್ ದರ 2 ಪೈಸೆ ಏರಿಕೆ ಮಾಡಲಾಗಿದೆ. ಈ ಕೋಚ್​ಗಳಲ್ಲಿ ಟಿಕೆಟ್ ದರ ಪ್ರತೀ 50 ಕಿಮೀ ದೂರಕ್ಕೆ 1 ಒಂದು ರೂ ಹೆಚ್ಚುವರಿ ದರ ಸೇರ್ಪಡೆಯಾಗುತ್ತದೆ.

ಞಈ ಪರಿಷ್ಕೃತ ಟಿಕೆಟ್ ದರದ ನಂತರವೂ ಭಾರತದಲ್ಲಿ ರೈಲು ಪ್ರಯಾಣ ಇನ್ನಿತರ ಸಾರಿಗೆ ವ್ಯವಸ್ಥೆಗಿಂತ ಕಡಿಮೆಯೇ ಇರುತ್ತದೆ. ಈ ಅಲ್ಪ ಏರಿಕೆಯಿಂದ ಭಾರತೀಯ ರೈಲ್ವೆಗೆ ವಾರ್ಷಿಕವಾಗಿ 600 ಕೋಟಿ ರೂನಷ್ಟು ಆದಾಯ ಹೆಚ್ಚಳ ಆಗುವ ನಿರೀಕ್ಷೆ ಇದೆ.ಭಾರತೀಯ ರೈಲ್ವೇಸ್ ಸಂಸ್ಥೆ ಕಳೆದ ಒಂದು ದಶಕದಲ್ಲಿ ತನ್ನ ಜಾಲವನ್ನು ಸಾಕಷ್ಟು ವಿಸ್ತರಿಸಿದೆ. ಟ್ರೈನುಗಳ ಸಂಖ್ಯೆ ಹೆಚ್ಚಿಸಿದೆ. ಮಾನವ ಸಂಪನ್ಮೂಲಗಳನ್ನೂ ಹೆಚ್ಚಿಸಿದೆ. ಮಾನವ ಸಂಪನ್ಮೂಲ ವೆಚ್ಚ 1,15,000 ಕೋಟಿ ರೂಗೆ ಏರಿದೆ. ಪಿಂಚಣಿ ವೆಚ್ಚ 60,000 ಕೋಟಿ ರೂ ಆಗಿದೆ. 2024-25ರಲ್ಲಿ ಅದರ ಕಾರ್ಯಾಚರಣೆಗಳ ಒಟ್ಟೂ ವೆಚ್ಚ 2.63 ಲಕ್ಷ ಕೋಟಿ ರೂಗೆ ಏರಿದೆ. ಈ ವೆಚ್ಚ ಹೆಚ್ಚಳವನ್ನು ಸರಿದೂಗಿಸಲು ರೈಲ್ವೇಸ್ ಟಿಕೆಟ್ ಪ್ರಯಾಣ ದರವನ್ನು ಏರಿಸುತ್ತಿದೆ. ಜುಲೈ ತಿಂಗಳಲ್ಲೂ ರೈಲ್ವೆ ಟಿಕೆಟ್ ಪ್ರಯಾಣ ದರವನ್ನು ಪರಿಷ್ಕರಿಸಿ ಪೈಸೆ ಲೆಕ್ಕದಲ್ಲಿ ಬೆಲೆ ಏರಿಕೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here