ನರಿಕೊಂಬು ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳಿಗೆ ತರಬೇತಿ ಕಾರ್ಯಗಾರ

0
15

ಬಂಟ್ವಾಳ : ಬಾಳ್ತಿಲ ಹಾಗೂ ಬಂಟ್ವಾಳ ನಗರ ಕ್ಲಸ್ಟರ್ನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಗಾರ ಮಾರ್ಚ್ 27ರ ಗುರುವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನರಿಕೊಂಬು ಇಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಕೊಂಬು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿ ಅಂಚನ್ ವಹಿಸಿದ್ದರು. ಕಾರ್ಯದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೇಮಿ ಫೆರ್ನಾಂಡಿಸ್ ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಎಸ್ ಡಿ ಎಂ ಸಿ ಯ ರಚನೆ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕತ೯ವ್ಯಗಳು, ಶಾಲಾ ಅಭಿವೃದ್ಧಿ ಮತ್ತು ಮೇಲುಉಸ್ತುವಾರಿ ಸಮಿತಿ ನಿರ್ವಹಿಸಬೇಕಾದ ಕರ್ತವ್ಯಗಳು, ಗುಣಾತ್ಮಕ ಶಿಕ್ಷಣ, ಸಮಿತಿಯ ಸಭೆಗಳು ಮತ್ತು ವಿಧಿ ವಿಧಾನಗಳು, ಶಾಲಾ ಅಭಿವೃದ್ಧಿ ಯೋಜನೆ ತಯಾರಿ, ಅನುಷ್ಠಾನ, ಅನು ಪಾಲನೆ, ಮೌಲ್ಯಮಾಪನ, ಮುಂತಾದವುಗಳ ಬಗ್ಗೆ ಚರ್ತಾತ್ಮಕವಾಗಿ ವಿಷಯವನ್ನು ತಿಳಿಸಿದರು.

ಕ್ಲಸ್ಟರ್ ಸಿ ಆರ್ ಪಿ ಗಳಾದ ಸತೀಶ್ ರಾವ್, ಸುಧಾಕರ್ ಭಟ್, ನರಿಕೊಂಬು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಾಳ್ತಿಲ ಹಾಗೂ ಬಂಟ್ವಾಳ ನಗರ ಕ್ಲಸ್ಟರ್ನ ಶಾಲೆಗಳ ಮುಖ್ಯ ಶಿಕ್ಷಕರುಗಳು ಶಾಲಾಭಿವೃದ್ಧಿ ಸಮಿತಿ ಸದಸ್ಯರಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here