ಆಸ್ತಿ ವಿಚಾರಕ್ಕೆ ಸಾರಿಗೆ ಇಲಾಖೆ ನೌಕರನ ಭೀಕರ ಹತ್ಯೆ

0
21

ಹಾಸನ: ಆಸ್ತಿ ವಿಚಾರಕ್ಕೆ ಸಾರಿಗೆ ಇಲಾಖೆ ನೌಕರರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ದಾಯಾದಿಗಳು ಕೊಲೆಗೈದ ಆರೋಪ ಕೇಳಿಬಂದಿದೆ. ಸಾರಿಗೆ ನೌಕರ ವೀರಪ್ಪ(58) ಭೀಕರವಾಗಿ ಹತ್ಯೆಯಾದವರು ಎಂದು ಹೇಳಲಾಗಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಆಲೂರಿನಲ್ಲಿ ಕೋರ್ಟ್ ಕೇಸ್ ಮುಗಿಸಿ ಜಮೀನಿನ ಬಳಿ ಬಂದಿದ್ದಾಗ ಬೆಂಕಿ ಹಚ್ಚಿ ವೀರಪ್ಪನ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಹಾಸನ ಎಸ್ಪಿ ಶುಭಾನ್ವಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

LEAVE A REPLY

Please enter your comment!
Please enter your name here