ಕರಿಮಣೇಲು ಬಳಿ ರಾಜ್ಯ ಹೆದ್ದಾರಿಗೆ ಉರುಳಿ ಬಿದ್ದ ಮರ

0
89

ವೇಣೂರು: ಇಂದು ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಮೂಡುಬಿದಿರೆ-ವೇಣೂರು ರಾಜ್ಯ ಹೆದ್ದಾರಿಯ ಕರಿಮಣೇಲು ಬಳಿ ಬೃಹತ್ ಮರವೊಂದು ಹೆದ್ದಾರಿಗೆ ಉರುಳಿ ಬಿದ್ದು ಸಂಪರ್ಕ ಕಡಿತಗೊಂಡಿತು.
ವೇಣೂರು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಿದರು. ಹೆದ್ದಾರಿ ಸಂಚಾರದಲ್ಲಿ ಕೆಲವೊತ್ತು ಅಡಚಣೆ ಉಂಟಾಗಿದ್ದು, ವೇಣೂರು ಪೊಲೀಸರು ವಾಹನ ಸಂಚಾರ ನಿಯಂತ್ರಣದಲ್ಲಿ ಸಹಕರಿಸಿದರು. ಇಲ್ಲಿ ಇನ್ನೂ ಕೆಲವು ಅಪಾಯಕಾರಿ ಮರಗಳಿದ್ದು, ತೆರವುಗೊಳಿಸಬೇಕೆಂಬ ಅಗ್ರಹ ಕೇಳಿ ಬಂದಿದೆ.

LEAVE A REPLY

Please enter your comment!
Please enter your name here