ಮೂಡುಬಿದಿರೆ: ಮಾಧ್ಯಮಬಿಂಬ ಪತ್ರಿಕೆ, ಮಾಧ್ಯಮಬಿಂಬ ನ್ಯೂಸ್ ವೆಬ್‌ಸೈಟ್, ಸ್ವಯಂ ಟೈಮ್ಸ್ ಬಳಗದ ಹಿರಿಯ ಪತ್ರಕರ್ತ ನವೀನ್ ಸಾಲ್ಯಾನ್‌ರನ್ನು ಜೇಸಿಐ ಮೂಡುಬಿದಿರೆ ತ್ರಿಭುವನ್‌ನ ಜೇಸಿ ವೀಕ್ ಸಮಾರೋಪ ಸಮಾರಂಭದಲ್ಲಿ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು. ಶಾಲು, ಫಲವಸ್ತು, ಸನ್ಮಾನ ಪತ್ರದೊಂದಿಗೆ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಜೇಸಿಐ ವಲಯ ಉಪಾಧ್ಯಕ್ಷ ಸುಹಾಸ್, ಆಂಬುಲೆನ್ಸ್ ಸರ್ವೀಸ್‌ನ ಪ್ರಶಾಂತ್ ಶೆಟ್ಟಿ, ಹಾಗೂ ಕಮಲ ಪತ್ರ ಪುರಸ್ಕೃತ ವರುಣ್ ಕುಮಾರ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು. ಬ್ರೈಟ್ ಹಾರಿಝೋನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಚೇರ್‌ಮೆನ್ ಶರತ್ ಗೋರೆ, ಜೇಸಿಐ ತ್ರಿಭುವನ್ ಹಿರಿಯ ಸದಸ್ಯ ಅನಂತವೀರ್ ಜೈನ್, ಮಾಜಿ ಅಧ್ಯಕ್ಷರಾದ ಅಬುಲಾಲ್ ಪುತ್ತಿಗೆ, ಮಹಮ್ಮದ್ ಆರೀಫ್, ಮಹೇಂದ್ರವರ್ಮ, ಪ್ರದೀಪ್ ಕುಮಾರ್, ಹಾಲಿ ಅಧ್ಯಕ್ಷ ವರ್ಷಾ ಕಾಮತ್, ಕಾರ್ಯದರ್ಶಿ ಶ್ರವಣ್ ಕುಮಾರ್, ಲೇಡಿ ಜೇಸಿಐನ ಅಧ್ಯಕ್ಷ ಸಹನಾ, ಜೇಸಿವೀಕ್ ಚೇರ್‌ಮೆನ್ ಸುಧಾಕರ ಶೆಟ್ಟಿ, ಜೇಜೆಸಿ ಅಧ್ಯಕ್ಷ ಮಹಮ್ಮದ್ ಅವೈಸ್ ಉಪಸ್ಥಿತರಿದ್ದರು.
ವರದಿ: ಜಗದೀಶ್ ಪೂಜಾರಿ ಕಡಂದಲೆ