ಟೆಕ್ನಾಲಜಿ ಮುಂದುವರೆಯುತ್ತಿರುವಂತೆ ಜನರು ಕೂಡ ಟೆಕ್ನಾಲಜಿಗೆ ಹೊಂದಿಕೊಂಡಿದ್ದಾರೆ. ಗೂಗಲ್, ಎಐ (AI) ಬಂದಾಗಿನಿಂದ ಅದೆಷ್ಟೋ ಕೆಲಸಗಳು ಸಲೀಸಾಗಿ ನಡೆಯುತ್ತಿವೆ. ಅದೇ ರೀತಿ ಕೆಲವರಿಗೆ ಕೆಲ ಅನಾನುಕೂಲ ಕೂಡ ಆಗಿದೆ. ಅದೇ ರೀತಿ ಇಲ್ಲೊಬ್ಬ ಮಹಿಳೆ ಗೂಗಲ್ ಮ್ಯಾಪ್ ಹಾಕಿಕೊಂಡು ತಾವು ಹೋಗಬೇಕಾದ ಸ್ಥಳಕ್ಕೆ ಪ್ರಯಾಣ ಮಾಡುತ್ತಿದ್ದರು. ಆದರೆ ಗೂಗಲ್ ಮ್ಯಾಪ್ ಮಾಡಿದ ಎಡವಟ್ಟಿಗೆ ಆ ಮಹಿಳೆ ಕಾರು ಸಮೇತ ಕಂದಕಕ್ಕೆ ಬಿದ್ದಿದ್ದಾರೆ.
ನವಿ ಮುಂಬೈನ ಬೇಲಾಪುರದಿಂದ ಉಲ್ವೆಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಗೂಗಲ್ ಮ್ಯಾಪ್‌ನ ತಪ್ಪು ಮಾರ್ಗದರ್ಶನದಿಂದಾಗಿ ತಮ್ಮ ಕಾರನ್ನು ಕಂದಕಕ್ಕೆ ಚಲಾಯಿಸಿದ ಘಟನೆ ಜುಲೈ 26, 2025ರಂದು ಮುಂಜಾನೆ 1 ಗಂಟೆ ಸುಮಾರಿಗೆ ಸಂಭವಿಸಿದೆ.
ಗೂಗಲ್ ಮ್ಯಾಪ್ ಎಡವಟ್ಟು; ಕಂದಕಕ್ಕೆ ಬಿದ್ದ ಕಾರು!
ಗೂಗಲ್ ಮ್ಯಾಪ್ ಕೆಲವುಮೊಮ್ಮೆ ಎಡವಟ್ಟು ಮಾಡಿ ತಪ್ಪು ಮಾರ್ಗದರ್ಶನ ನೀಡುತ್ತೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆ. ಮಹಿಳೆ ನವಿ ಮುಂಬೈನ ಬೇಲಾಪುರದಿಂದ ಉಲ್ವೆಗೆ ಪ್ರಯಾಣಿಸುತ್ತಿದ್ದು, ತಪ್ಪು ಮಾರ್ಗದರ್ಶನದಿಂದ ಕಂದಕಕ್ಕೆ ಕಾರನ್ನು ಚಲಾಯಿಸಿದ್ದಾರೆ. ಸದ್ಯ ಅದೃಷ್ಟವಶಾತ್ ಈ ಘಟನೆಯಲ್ಲಿ ಮಹಿಳೆ ಗಾಯಗೊಳ್ಳದೆ ಪಾರಾಗಿದ್ದು, ಸಾಗರ ಭದ್ರತಾ ಪಡೆಯ (ಮರೈನ್ ಸೆಕ್ಯುರಿಟಿ ಫೋರ್ಸ್) ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ರಕ್ಷಿಸಲ್ಪಟ್ಟಿದ್ದಾಳೆ.
ಸ್ಥಳೀಯರಿಂದ ಮಹಿಳೆ ರಕ್ಷಣೆ!
ಕಾರನ್ನು ಕಂದಕದಿಂದ ಕ್ರೇನ್ ಮೂಲಕ ಹೊರತೆಗೆಯಲಾಯಿತು. ಈ ಘಟನೆಯು ಭಾರತದಲ್ಲಿ ಗೂಗಲ್ ಮ್ಯಾಪ್‌ನಂತಹ ನ್ಯಾವಿಗೇಷನ್ ಆಪ್‌ಗಳ ದೋಷಯುಕ್ತ ಮಾರ್ಗದರ್ಶನದಿಂದ ಉಂಟಾಗುವ ಅಪಾಯಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.ಮಹಿಳೆಯು ಬೇಲಾಪುರದ ಬೇ ಸೇತುವೆಯ ಮೂಲಕ ಉಲ್ವೆಗೆ ತೆರಳಬೇಕಿತ್ತು, ಆದರೆ ಗೂಗಲ್ ಮ್ಯಾಪ್ ಧ್ರುವತಾರ ಜೆಟ್ಟಿಗೆ ಹೋಗುವ ಸೇತುವೆಯ ಕೆಳಗಿನ ಮಾರ್ಗವನ್ನು ಸೂಚಿಸಿತು. ಈ ತಪ್ಪು ಮಾರ್ಗದರ್ಶನವನ್ನು ನಂಬಿದ ಮಹಿಳೆ, ಕಾರನ್ನು ಚಲಾಯಿಸುತ್ತಾ ಸಾಗಿದ್ದಾಳೆ, ಆದರೆ ಕೆಲವೇ ನಿಮಿಷಗಳಲ್ಲಿ ಕಾರು ಕಂದಕದ ನೀರಿಗೆ ಜಾರಿದೆ.

