ಪೂಜ್ಯ ಖಾವಂದರ 78ನೇ ಹುಟ್ಟುಹಬ್ಬದ ಅಂಗವಾಗಿ ಮುಡಿಪು ಶಾಲೆಯಲ್ಲಿ ಟ್ಯೂಷನ್ ಕ್ಲಾಸ್ ಉದ್ಘಾಟನೆ

0
83

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ವಿಟ್ಲ ತಾಲೂಕಿನ ಮುಡಿಪು ವಲಯದ ಮುಡಿಪು ಸರಕಾರಿ ಶಾಲೆಯಲ್ಲಿ ಪರಮ ಪೂಜ್ಯ ಖಾವಂದರ 78ನೇ ವರ್ಷದ ಹುಟ್ಟುಹಬ್ಬದ ಹಬ್ಬದ ಪ್ರಯುಕ್ತ ಟ್ಯೂಷನ್ ಕ್ಲಾಸ್ ಉದ್ಘಾಟನೆಯನ್ನು ಚಂದ್ರಹಾಸ ಕಣಂತುರು ಜನ ಜಾಗೃತಿ ಸದಸ್ಯರು ನೆರವೇರಿಸಿ ಪೂಜ್ಯ ಖಾವಂದರು ಶಿಕ್ಷಣ ಕ್ಷೇತ್ರಕ್ಕೆ ನೀಡುವ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಕೇಂದ್ರ ಒಕ್ಕೂಟ ಅಧ್ಯಕ್ಷರಾದ ನವೀನ್ ಚಂದ್ರ ಕಣಂತೂರುರವರು ವಹಿಸಿ ಯೋಜನೆಯ ಮೂಲಕ ನಡೆಯುವ ಸಮಾಜಮುಖಿ ಕೆಲಸಗಳ ಬಗ್ಗೆ ತಿಳಿಸಿದರು. ವಲಯ ಮೇಲ್ವಿಚಾರಕರಾದ ಪ್ರೇಮಲತಾರವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಶಾಲೆಯ ಮುಖ್ಯಶಿಕ್ಷಕರಾದ ಪ್ರಾನ್ಸಿಸ್ ರವರು ಕಾರ್ಯಕ್ರಮದ ಮೆಚ್ಚುಗೆ ವ್ಯಕ್ತಪಡಿಸಿ ಪೂಜ್ಯ ಖಾವಂದರಿಗೆ ಶುಭ ಹಾರೈಸಿದರು. ಕಾರ್ಯಕ್ರಮ ಕ್ಕೆ ಪಜೀರ್ ಒಕ್ಕೂಟ ಅಧ್ಯಕ್ಷರು ವಿನೋದ್ ರವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಧಿಕಾರಿ ದೀಪ, ಶಿಕ್ಷಕರು, ಸೇವಾಪ್ರತಿನಿಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here