ದಕ್ಷಿಣ ಕನ್ನಡ : ತುಳುವ ಮಹಾಸಭೆಯ ತಾಲೂಕು ಸಂಚಾಲಕರ ಸಭೆಯು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದ ಕಚೇರಿಯಲ್ಲಿ ಜರುಗಿತು. ಕಟೀಲು ಮಾತೆಯ ಸಂಪೂರ್ಣ ಅನುಗ್ರಹ ದೊಂದಿಗೆ ಹಾಗೂ ಹರಿನಾರಾಯಣ ಅಸ್ತ್ರಣ್ಣ ಇವರ ಶುಭಾಶಿರ್ವಾದೊಂದಿಗೆ ತುಳು ಮಹಾಸಭೆಯ ಸಂಚಾಲಕ ಪ್ರಮೋದ್ ಸಪ್ರೆಯವರು ಸ್ವಾಗತ ಮತ್ತು ಪ್ರಸ್ತಾವನೆಯ ಮಾತುಗಳನ್ನಾಡಿದರು.
ಪ್ರಮೋದ್ ಸಪ್ರೆ ತಮ್ಮ ಪ್ರಸ್ತಾವನೆಯಲ್ಲಿ ತುಳು ಮಹಾಸಭೆಯ ಉದ್ದೇಶಗಳು, ತುಳು ಮಹಾಸಭೆಯ ಕಾರ್ಯ ವ್ಯಾಪ್ತಿ, ತುಳು ಮಹಾಸಭೆ ಸದಸ್ಯರ ಸಮಾಜ ಸೇವೆ, ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳ, ಧರ್ಮ ನಂಬಿಕೆಗಳ ಉದ್ದೇಶಗಳನ್ನ ವಿವರಿಸಿದ್ದರು.

ತುಳು ವರ್ಲ್ಡ್ ಸಂಸ್ಥೆ ಮುಖ್ಯಸ್ಥ ಹಾಗೂ ತುಳು ಮಹಾಸಭೆಯ ಕಾರ್ಯಾಧ್ಯಕ್ಷ ಡಾ. ರಾಜೇಶ ಆಳ್ವ ಮಾತನಾಡಿ, ತುಳು ಮಹಾಸಭೆಯ ಇತಿಹಾಸ, ನಡೆದು ಬಂದ ದಾರಿ, ತುಳು ಮಹಾಸಭೆಯ ಮುಂದಿನ ಉದ್ದೇಶ, ತುಳು ಜನರ ಆಚಾರ ವಿಚಾರಗಳ ರಕ್ಷಣೆ, ಕಳರಿ ಇತಿಹಾಸ ಹಾಗೂ ಅಭ್ಯಾಸ, ತುಳು ಜನರ ಮುಂದಿರುವ ಸವಾಲುಗಳು, ಸಾಂಸ್ಕೃತಿಕ, ಧಾರ್ಮಿಕ, ಜಾನಪದ, ಮತ್ತು ಜನಪದ ಬದುಕಿನ ಬಗ್ಗೆ ವಿವರಿಸಿದರು. ತುಳುವ ಮಹಾಸಭೆಯ ತಾಲೂಕು ಸಂಚಾಲಕರ ಸಭೆಯಲ್ಲಿ ಮಂಗಳೂರು, ಮುಲ್ಕಿ, ಮೂಡಬಿದಿರೆ, ಬೆಳ್ತಂಗಡಿ, ಕಡಬ, ಸುಳ್ಯ, ಉಡುಪಿ, ಕುಂದಾಪುರ, ಬೈಂದೂರು, ಮಂಜೇಶ್ವರ, ಕಾಪು, ಬದಿಯಡ್ಕ, ಕಾಸರಗೋಡು, ಉಳ್ಳಾಲ, ಸೇರಿದಂತೆ ಎಲ್ಲಾ ತಾಲೂಕು ಸಂಚಾಲಕರು ಉಪಸ್ಥಿತರಿದ್ದು, ತಮ್ಮ ಅನಿಸಿಕೆಗಳು ಮತ್ತು ಕೆಲವೊಂದು ಸಮಸ್ಯೆಗಳನ್ನು ಪರಸ್ಪರ ಚರ್ಚಿಸಿ, ಸಮಾಧಾನಕರ ಉತ್ತರ ಕಂಡುಕೊಳ್ಳುವುದರ ಜೊತೆಗೆ, ಒಮ್ಮತದ ಅಭಿಪ್ರಾಯದೊಂದಿಗೆ ತುಳುವ ಮಹಾಸಭೆಯ ಉದ್ದೇಶಿತ ಕಾರ್ಯಕ್ರಮಗಳನ್ನು ಒಗ್ಗಟ್ಟಿನೊಂದಿಗೆ ಮುಂದುವರಿಸುವ ಅಭಿಪ್ರಾಯದೊಂದಿಗೆ ಇಂದಿನ ಸಭೆಯು ಸಂಪನ್ನಗೊಂಡಿತು.
ವರದಿ:- ಮಂದಾರ ರಾಜೇಶ್ ಭಟ್