ವರದಿ- ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ
ತುಳುನಾಡು: ಕಡಬ ತಾಲೂಕಿನ ಅಲಂಕಾರು ಭಾರತಿ ಶಾಲೆಯ ಆವರಣದಲ್ಲಿ ಈ ತಿಂಗಳ ಸೆಪ್ಟೆಂಬರ್ 20, ಶನಿವಾರ ಮಧ್ಯಾಹ್ನ 2 ಗಂಟೆಗೆ ತುಳುವ ಮಹಾಸಭೆ ಕಡಬ ತಾಲೂಕು ಘಟಕದ ವತಿಯಿಂದ ತುಳು ನಾಡಗೀತೆ ಅಭ್ಯಾಸ ಮತ್ತು ಸಮೂಹ ಗಾಯನ ಏರ್ಪಡಿಸಲಾಗಿದೆ.
“ತುಳುನಾಡಗೀತೆ ಗಾಯನೋ” ಎಂಬ ಶೀರ್ಷಿಕೆಯಡಿ ನಡೆಯುವ ಈ ಕಾರ್ಯಕ್ರಮ, ಡಾ. ಮೋನಪ್ಪ ತಿಂಗಳಾಯರ “ಜಯ ಜಯ ಜಯ ತುಳುವ ಸೀಮೆ ಅಪ್ಪೆನಾಡುಗ್ ” ಎಂಬ ತುಳುನಾಡ ಗೀತೆಯ 125ನೇ ವರ್ಷದ ಸಂಭ್ರಮಾಚರಣೆಗೆ ಸಮರ್ಪಿತವಾಗಿದೆ.

ಬಹುಭಾಷಾ ಸಂಗೀತ ನಿರ್ದೇಶಕ ಪ್ರಮೋದ್ ಸಪ್ರೆ ರಾಗ ತಾಳ ಲಯಬದ್ಧವಾಗಿ ನಾಡಗೀತೆಯನ್ನು ಸಮೂಹಗಾನವಾಗಿ ಹಾಡಲು ಹೇಳಿಕೊಡಲಿದ್ದು ತುಳುನಾಡದ ಪರಂಪರೆ, ಸಂಸ್ಕೃತಿ, ಭಾವನೆಗಳನ್ನು ಸ್ಪರ್ಶಿಸುವ ಸಮೂಹ ಗಾಯನ ಸಂಗೀತ ಜನರ ಮನೆ ಮನೆಗೆ ತಲುಪಲಿದೆ.
ತುಳುವ ಮಹಾಸಭೆ ಕಡಬ ತಾಲೂಕು ಘಟಕದ ಸಂಚಾಲಕಿ ಆಶಾ ರೈ ನೇತೃತ್ವದಲ್ಲಿ ಕಡಬ ತಾಲೂಕು ತುಳುವ ಮಹಾಸಭೆ ಎಲ್ಲ ಸದಸ್ಯರ ಸಹಕಾರದೊಂದಿಗೆ ನಡೆಯಲಿದ್ದು “ತುಳುನಾಡ ಗೀತೆ ನಮ್ಮ ಅಸ್ತಿತ್ವದ ಧ್ವನಿ. ಈ ಗೀತೆ ತಲೆಮಾರುಗಳಿಂದ ತಲೆಮಾರುಗಳಿಗೆ ಸಂಸ್ಕೃತಿಯ ಜ್ಯೋತಿಯನ್ನು ಹಂಚುತ್ತಿದೆ. ಈ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವುದು ಅಗತ್ಯ” ಎಂದು ಕರೆ ನೀಡಿದರು.
ತುಳುನಾಡ ಪ್ರೇಮಿಗಳು, ವಿದ್ಯಾರ್ಥಿಗಳು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಸಂಸ್ಥೆಯ ಪರವಾಗಿ ಅಧ್ಯಕ್ಷೆ ಆಶಾ ರೈ ಅವರು ತುಳುವ ಸಂಸ್ಕೃತಿ ಪ್ರೇಮಿಗಳನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ.