ತುಳುಕೂಟ ಬಂಟ್ವಾಳ ತುಳುವೆರೆನ ತುಳುನಾಡ ಸಂತೆ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮವು ಸ್ವರ್ಶ ಕಲಾಮಂದಿರ, ಬಿ.ಸಿ. ರೋಡ್ ಇಂದು ( 21-06-2025ನೇ ಶನಿವಾರ) ಅಪರಾಹ್ನ ಗಂಟೆ 2-00ರಿಂದ ತುಳು, ಕನ್ನಡ, ಮಲಯಾಳಂ, ತಮಿಳು, ತೆಲುಗು, ಹವ್ಯಕ, ಶಿವಳ್ಳಿ ತುಳು, ಅರೆಭಾಸೆ, ಅರೆಕನ್ನಡ, ಕೊಡವ, ಕೊಂಕಣಿ, ಬ್ಯಾರಿ, ಮಲಾಮೆ, ಮರಾಠಿ ಭಾಷೆಗಳಲ್ಲಿ ವಿವಿಧ ಕವಿಗಳು ಹಲಸು ಮತ್ತು ಇತರ ಹಣ್ಣುಗಳ ಕುರಿತು ಕವನ ಚುಟುಕು ವಾಚನ ನಡೆಯಲಿದೆ.
ಡಾ| ಕೊಲ್ಟಪ್ಪೆ ಗೋವಿಂದ ಭಟ್, ಕೇರಳ ರಾಜ್ಯ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ, ದ.ಕ. ಜಿಲ್ಲಾಧ್ಯಕ್ಷರು ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಶ್ರೀ ಜಯಾನಂದ ಪೆರಾಜೆ, ಸಂಚಾಲಕರು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಸಂಚಾಲಕರು. ಶುಭ ಹಾರೈಕೆಯನ್ನು ಡಾ| ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಪ್ರಾಧಿಕಾರ, ಕರ್ನಾಟಕ ಸರಕಾರ ಮಾಡಲಿರುವರು. ಡಾ| ಸುರೇಶ್ ನೆಗಳಗುಳಿ, ಮೂಲವ್ಯಾದಿ ತಜ್ಞರು, ಕಣಚೂರು ಆಸ್ಪತ್ರೆ, ಕವಿನುಡಿ ನೀಡಿಲಿರುವರು. ಅತಿಥಿಗಳಾಗಿ ಮಂಗಳೂರು ಶ್ರೀ ಸುದರ್ಶನ್ ಜೈನ್ ಪಂಜಿಕಲ್ಲು, ಅಧ್ಯಕ್ಷರು ತುಳುಕೂಟ ಬಂಟ್ವಾಳ, ರೊ| ಡಾ. ಸುದೀಪ್ ಕುಮಾರ್ ಸಿದ್ದಕಟ್ಟೆ, ನಿರ್ದೇಶಕರು, ದ.ಕ. ವರ್ತಕರ ವಿ. ಸಹಕಾರಿ ಸಂಘ ನಿ.. ಬಂಟ್ವಾಳ ಶ್ರೀ ರಾಮಕೃಷ್ಣ ಆಳ್ವ, ಮಾಜಿ ಅಧ್ಯಕ್ಷರು, ಪುರಸಭೆ ಬಂಟ್ವಾಳ ಶ್ರೀ ಚಂದ್ರಹಾಸ್ ಪಲ್ಲಪಾಡಿ, ಉದ್ಯಮಿ ಉಪಸ್ಥಿತರಿರಲಿರುವರು.
ಬಹುಭಾಷಾ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು
ಗುಣಾಜೆ ರಾಮಚಂದ್ರ ಭಟ್ ದಯಾನಂದ ರೈ ಕಳ್ವಾಜೆ ಎ.ಎಸ್.ಬಾವ ಪುತ್ತೂರು ಜಯಶ್ರೀ ಶೆಣೈ ಬಂಟ್ವಾಳ ಕುಶಲಾಕ್ಷಿವಿ.ಕುಲಾಲ್ ಕಣ್ವತೀರ್ಥ ರೋಹಿಣಿ ಆಚಾರ್ಯ ಡಾ.ವಾಣಿಶ್ರೀ ಕಾಸರಗೋಡು ಮಮತಾ ಡಿ.ಕೆ. ಅನಿಲಕಟ್ಟೆ ಎಂ.ಎ.ಮುಸ್ತಫಾ ಬೆಳ್ಳಾರೆ ಹೇಮಲತಾ ಗಣೇಶ ಕಜೆಗದ್ದೆ ಸುಳ್ಯ ಶ್ವೇತಾ ಡಿ. ಬಡಗಬೆಳ್ಳೂರು ಗಿರೀಶ ಪೆರಿಯಡ್ಕ ಹೇಮಂತ ಕುಮಾರ ಡಿ. ಪರಮೇಶ್ವರೀ ಪ್ರಸಾದ್, ಮಹೇಶ ನಿಟಿಲಾಪುರ ವಿಕುಭ ಹೆಬ್ಬಾರಬೈಲು ಪುತ್ತೂರು ರಮೇಶ ಮೆಲ್ಕಾರ್ ಗೀತಾ ಕೊಂಕೋಡಿ ರಶ್ಮಿತಾ ಸುರೇಶ್ ಜೋಗಿಬೆಟ್ಟು ಅನ್ನಪೂರ್ಣ ಎನ್. ಕುತ್ತಾಜೆ ಪ್ರಮೀಳಾ ದೀಪಕ್ ಪೆರ್ಮುದೆ ಶಾಂತಾ ಪುತ್ತೂರು ವಿಂದ್ಯಾ ಎಸ್.ರೈ ಸಂಗೀತ ಶರ್ಮ ವೀರಕಂಬ ರಾಜರಾಜೇಶ್ವರಿ ಬಂಟ್ವಾಳ ಯಶೋದಾ ನೆಲ್ಯಾಡಿ ಮಲ್ಲಿಕಾ ಜೆ. ರೈ.
ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಲಿರುವರು.

