ಕಡಬ: ಕಡಬ ತಾಲೂಕು ಕುಂತೂರು ಗ್ರಾಮದ ಕುಂತೂರು ಮಜಲು ಬಾಬು ಗೌಡರ ಬಾಕಿಮಾರು ಗದ್ದೆಯಲ್ಲಿ 3ನೇ ವರ್ಷದ ತುಳುನಾಡ್ ತುಡರ್ ಕೂಟದ ವತಿಯಿಂದ 6-7-2025 ರಂದು ಕಂಡೊಡೊಂಜಿ ದಿನ ಕಾರ್ಯಕ್ರಮದ ಪ್ರಯುಕ್ತ 48 ಬಗೆಯ ಆಟೋಟ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಬೆಳಗಿನ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂಧ್ಯಾ ಕೆದ್ದೊಟೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬಾಬು ಗೌಡ ಕುಂತೂರು ಮಜಲು ದೀಪವನ್ನು ಬೆಳಗಿಸಿ ಶುಭವನ್ನು ಹಾರೈಸಿದರು. ಅತಿಥಿಗಳಾದ ಮಹೇಶ್. ಕೆ. ಸವಣೂರು ಅಧ್ಯಕ್ಷರು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ (ರಿ) ಕಡಬ ಮತ್ತು ವಿವೇಕ್ ರೈ ಕುಂತೂರು ಗುಪ್ತಚರ ಪೋಲೀಸ್ ಇಲಾಖೆ ಮಂಗಳೂರು. ಅತಿಥಿಗಳಾದ ವಿಶ್ವನಾಥ ಪೂಜಾರಿ ಪ್ರಗತಿಪರ ಕೃಷಿಕರು, ಲಕ್ಷ್ಮಿ ನಾರಾಯಣ ಪ್ರಭು ಆಲಂಕಾರು ಅಧ್ಯಕ್ಷರು ಲಯನ್ಸ್ ಕ್ಲಬ್ ಆಲಂಕಾರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕ್ರೀಡಾಜ್ಯೋತಿಯನ್ನು ವಿವೇಕ್ ರೈ ರೈಬೆಳಗಿಸಿದರು. ಆಟೋಟ ಸ್ಪರ್ಧೆಯ ಉದ್ಘಾಟನೆಯನ್ನು ಮಹೇಶ್. ಕೆ. ಸವಣೂರು ಇವರು ಗದ್ದೆಗೆ ಹಾಲನ್ನು ಎರೆಯುವ ಮೂಲಕ ಚಾಲನೆ ನೀಡಿದರು. ತುಳುನಾಡು ತುಡಾರ್ ಇದರ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಲೋಕೇಶ್ವರಿ ವಂದಿಸಿದರು ಮತ್ತು ಚೆನ್ನಕೇಶವ ರೈ ನಿರೂಪಿಸಿದರು.
ಸಾಧಕರಿಗೆ ಸನ್ಮಾನಿಸಲಾಯಿತು ಊರಿನ ಹಿರಿಯರಾದ 175ಕಿಂತಲೂ ಹೆಚ್ಚು ಹೆರಿಗೆ ಮಾಡಿಸಿದ ಪ್ರಸೂತಿ ತಜ್ಞೆ ಅಂತರಕ್ಕೆ ಕೇವಳ ಪಟ್ಟೆ, ಸುಜಿತ್ ಗೊಳಿತ್ತಡಿ 2025 ರ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ ಕುಂತೂರಿನ ಹೆಮ್ಮೆಯ ಹುಡುಗ. ಎಲ್ಲರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಆಟೋಟ ಸ್ಪರ್ಧೆಯ ನಿರೂಪಕರಾದ ಸುರೇಶ್ ಪಡಿಪಂಡ ಇವರನ್ನು ಕೂಡಾ ಕೆಸರು ಗದ್ದೆಯಲ್ಲಿ ಸನ್ಮಾನಿಸಲಾಯಿತು. ಕಬ್ಬಡಿ, ವಾಲಿಬಾಲ್, ಕ್ರಿಕೆಟ್ ಮತ್ತು ಹಗ್ಗಜಗ್ಗಾಟದಲ್ಲಿ ಸರಿ ಸುಮಾರು 202 ಗ್ರೆಡ್ ಮಾದರಿಯ ಪಂದ್ಯಾವಳಿಯನ್ನು ನಿರೂಪಣೆ ಮಾಡಿ ಖ್ಯಾತಿಗಳಿಸಿರುವ ಇವರಿಗೆ ತುಳುನಾಡ್ ತುಡರ್ ಸದಸ್ಯರು ಸೇರಿ ಮಾತಿನ ಮಾಣಿಕ್ಯ ಬಿರುದು ನೀಡಿ ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆಯ ಸಭಾಧ್ಯಕ್ಷತೆಯನ್ನು ಕೃಷ್ಣ ಪ್ರಸಾದ್ ಉಪಾಧ್ಯಾಯ ಅರ್ಚಕರು ಮಹಾಲಿಂಗೇಶ್ವರ ದೇವಸ್ಥಾನ ಅರಬ್ಬಿ ಕುಂತೂರು. ಅತಿಥಿಗಳಾದ ಹರೀಶ್ ಮುಂಡಾಳ ಅಧ್ಯಕ್ಷರು ಶ್ರೀರಾಮ ಭಜನಾ ಮಂದಿರ ಕುಂತೂರು ಪದವು. ಕ. ಸಿ ಚಂದ್ರಹಾಸ ಶಿಕ್ಷಕರು ಭಾರತಿ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರು. ಯುವರಾಜ ಕುಂಟ್ಯಾನ ಅಧ್ಯಕ್ಷರು ನೆತ್ತೆರ್ತಾಯ ದೈವಸ್ಥಾನ ಕುಂಟ್ಯಾನ. ಚೆನ್ನಪ್ಪ ಗೌಡ ನಿವ್ರತ ಪೊಲೀಸ್ ಅಧಿಕಾರಿ ಇವರು ಶುಭ ಹಾರೈಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಮೇಘಾನಾಥ ಸ್ವಾಗತಿಸಿ ಮಮತಾ ಶೆಟ್ಟಿ ವಂದಿಸಿದರು.