ಕಲ್ಯಾಣ್ :ಪಾರ್ವತಿ ಅಪಾರ್ಟೆಂಟ್, ಹನುಮಾನ್ ನಗರ್, ಕಲ್ಯಾಣ್ ಪೂರ್ವ ಇಲ್ಲಿ ತುಳುನಾಡ್ ತುಳುವೆರ್ ಕಲ್ಯಾಣ್ ಸಂಸ್ಥೆಯವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಸಂಸ್ಥೆಯ ಸಂಸ್ಥಾಪಕರಾದ ಅಶೋಕ್ ಎಲ್. ಪೂಜಾರಿ ಉಲ್ಯ ಗುತ್ತು ಪಂಜ – ಕೊಯಿಕುಡೆ ಇವರ ಉಪಸ್ಥಿತಿಯಲ್ಲಿ ಬಹಳ ವಿಜೃಂಬಣೆಯಲ್ಲಿ ನಡೆಯಿತು.

ಸದಸ್ಯರುಗಳಾದ ಉಮಾ ಶೆಟ್ಟಿ, ರೇಖಾ ಶೆಟ್ಟಿ ಮತ್ತು ಸುಮಿತ್ರಾ ಶೆಟ್ಟಿಯವರ ಪ್ರಾಥನೆಯೊಂದಿಗೆ ರೇಖಾ ಶೆಟ್ಟಿ, ಕೃಷ್ಣ ಶೆಟ್ಟಿ ಇವರೊಂದಿಗೆ ಸಂಸ್ಥೆಯ ಸಂಸ್ಥಾಪಕರಾದ ಅಶೋಕ್ ಎಲ್ . ಪೂಜಾರಿ ಉಲ್ಯ ಗುತ್ತು ಪಂಜ – ಕೊಯಿಕುಡೆ, ಅಂಜನಾ ಪೂಜಾರಿ, ಪ್ರಭಾವತಿ ಸುವರ್ಣ, ಪದ್ಮನಿ ಕೋಟಿಯನ್, ಉಮಾ ಶೆಟ್ಟಿ, ಸುಮಿತ್ರ ಶೆಟ್ಟಿ, ಭವಾನಿ ಪೂಜಾರಿ ಮತ್ತು ಯಮುನ ಕುಲಾಲ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸದಸ್ಯೆರು ಪರಸ್ಪರ ಪುಷ್ಪ, ಎಳ್ಳುಂಡೆ ವಿನಿಮಯ ಮಾಡಿ ಕೊಂಡರು. ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪನ ಸದಸ್ಯರಾದ ಶ್ರೀಮತಿ ಪ್ರಭಾವತಿ ಸುವರ್ಣ ರನ್ನು ಶಾಲು ಹೊದೆಸಿ ಫಲ
ಪುಷ್ಪ ನೀಡಿ ಸನ್ಮಾನಿಸಲಾಯಿತು.
ರೇಖಾ ಶೆಟ್ಟಿ ಧನ್ಯವಾದ ಗೈದರು. ಕೊನೆಗೆ ಲಘು ಉಪಹಾರದೊಂದಿಗೆ ಕಾರ್ಯ ಕ್ರಮ ಕೊನೆಗೊಂಡಿತು.

