ನದಿ ಸ್ನಾನದ ವೇಳೆ ಅವಘಡ : ಇಬ್ಬರು ಮೃತ್ಯು

0
139


ಕಡಬ : ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ನದಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಸಂಭವಿಸಿದೆ . ಮೃತ ಯುವಕರನ್ನು ಸುಳ್ಯ ತಾಲೂಕಿನ ಕೊಲ್ಲಮೊಗ್ರು ನಿವಾಸಿಗಳಾದ ಹರಿಪ್ರಸಾದ್ (37) ಹಾಗೂ ಸುಜಿತ್ (26) ಎಂದು ಗುರುತಿಸಲಾಗಿದೆ.

ಮೃತರಿಬ್ಬರೂ ಅವಿವಾಹಿತರಾಗಿದ್ದು, ತಮ್ಮ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಕುಮಾರಧಾರ ನದಿಗೆ ಕುಲ್ಕುಂದ ಬಳಿ ಇಳಿದಿದ್ದು, ಆ ವೇಳೆ ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ನೀರಲ್ಲಿ ಮುಳುಗಿದ ಇಬ್ಬರ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ. ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here