ಮೈಸೂರು ಚಾಮರಾಜನಗರದಿಂದ ಎರಡು ಸಾವಿರ ಮಂದಿ ಭಕ್ತರು ಹಾಗೂ ಅಭಿಮಾನಿಗಳು ಧರ್ಮಸ್ಥಳದಲ್ಲಿ

0
60

.
ಉಜಿರೆ: ಮೈಸೂರಿನ ಚಾಮರಾಜನಗರ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡರ ನೇತೃತ್ವದಲ್ಲಿ ಎರಡು ಸಾವಿರ ಮಂದಿ ಭಕ್ತರು ಹಾಗೂ ಅಭಿಮಾನಿಗಳು ಬುಧವಾರ ಸಂಜೆ ಧರ್ಮಸ್ಥಳಕ್ಕೆ ೫೦ ವಾಹನಗಳಲ್ಲಿ ಆಗಮಿಸಿದರು.
ಅವರನ್ನು ಮುಖ್ಯಪ್ರವೇಶದ್ವಾರದ ಬಳಿ ಸ್ವಾಗತಿಸಲಾಯಿತು.
 ಬಳಿಕ ಅವರು ದೇವರ ದರ್ಶನ ಮಾಡಿ, “ಅನ್ನಪೂರ್ಣ”ದಲ್ಲಿ ಪ್ರಸಾದ ಸ್ವೀಕರಿಸಿದರು. ಇಂದು ಗುರುವಾರ ಬೆಳಿಗ್ಗೆ ೯ ಗಂಟೆಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಗೌರವಾರ್ಪಣೆ ಮಾಡುವ ಕಾರ್ಯಕ್ರಮವಿದೆ.
ಧರ್ಮಸ್ಥಳದ ಬಗ್ಗೆ ಆಗುತ್ತಿರುವ ಅಪಪ್ರಚಾರವನ್ನು ಖಂಡಿಸಿ ಸರ್ವಧರ್ಮ ಸಮನ್ವಯ ಕ್ಷೇತ್ರದ ರಕ್ಷಣೆ ಹಾಗೂ ಪಾವಿತ್ರö್ಯ ಕಾಪಾಡುವ ಬಗ್ಗೆ ಅವರು ತಮ್ಮಪೂರ್ಣ ಬೆಂಬಲ ವ್ಯಕ್ತಪಡಿಸುವರು ಎಂದು ಶಾಸಕ ಕೆ. ಹರೀಶ್ ಗೌಡ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಪತ್ತಿನ ಸಹಕಾರಿ ಮಹಾಮಂಡಲದ ಅಧ್ಯಕ್ಷರಾದ ಚಂದ್ರಶೇಖರ, ಕಾಂಗ್ರೆಸ್ ಪಕ್ಷದ ಮುಖಂಡ ಮಂಜುನಾಥ, ಬ್ಲಾಕ್ ಅಧ್ಯಕ್ಷ ರಮೇಶರಾಯಪ್ಪ, ರವಿ, ಮೈಸೂರಿನ ಮಾಜಿ ಮೇಯರ್ ಪುಷ್ಪಲತಾಚಿಕ್ಕಣ್ಣ, ಪುಷ್ಪವಲ್ಲಿ ಮೊದಲಾದವರು ಸೇರಿದಂತೆ ಸುಮಾರು ೨೦೦೦ ಮಂದಿ ಆಗಮಿಸಿದ್ದಾರೆ.  

LEAVE A REPLY

Please enter your comment!
Please enter your name here