JCTU ಸಂಯುಕ್ತ ಹೋರಾಟ-ಕರ್ನಾಟಕ ಕರೆಯ ಮೇರೆಗೆ
ಉತ್ಪಾದನೆ, ಸೇವೆ ಸ್ಥಗಿತಗೊಳಿಸಿ ರೈತ, ಕಾರ್ಮಿಕ, ಕೃಷಿ ಕೂಲಿಕಾರರ, ಮಹಿಳಾ, ವಿದ್ಯಾರ್ಥಿ-ಯುವಜನ, ವಿಮಾ, ಬ್ಯಾಂಕ್ ನೌಕರರ ಸಂಘ ಮತ್ತು ದಲಿತ ಸಂಘಟನೆಗಳ ಮುಷ್ಕರ ಬೃಹತ್ ಪ್ರತಿಭಟನೆ
ಉಡುಪಿ : ಫೆ.12 ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ,JCTU ಸಂಯುಕ್ತ ಹೋರಾಟ-ಕರ್ನಾಟಕ ಕರೆಯ ಮೇರೆಗೆ,ಉತ್ಪಾದನೆ, ಸೇವೆ ಸ್ಥಗಿತಗೊಳಿಸಿ ರೈತ, ಕಾರ್ಮಿಕ, ಕೃಷಿ ಕೂಲಿಕಾರರ, ಮಹಿಳಾ, ವಿದ್ಯಾರ್ಥಿ-ಯುವಜನ, ವಿಮಾ, ಬ್ಯಾಂಕ್ ನೌಕರರ ಸಂಘ ಮತ್ತು ದಲಿತ ಸಂಘಟನೆಗಳ ಮುಷ್ಕರ ಬೃಹತ್ ಪ್ರತಿಭಟನೆ ನಡೆಯಲಿದೆ.
ಪ್ರತಿಭಟನೆಯು ಉಡುಪಿಯಲ್ಲಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ, ಬೆಳಿಗ್ಗೆ 10:30ಕ್ಕೆ ಕಾರ್ಕಳದಲ್ಲಿ ಬಸ್ ನಿಲ್ದಾಣದ ಬಳಿ, ಬೆಳಿಗ್ಗೆ 10:00ಕ್ಕೆ ಕುಂದಾಪುರದಲ್ಲಿ ಶಾಸ್ತ್ರಿ ಸರ್ಕಲ್ ಬಳಿ, ಬೆಳಿಗ್ಗೆ 9:30ಕ್ಕೆ ಬೈಂದೂರಿನಲ್ಲಿ ತಹಸಿಲ್ದರ್ ಕಚೇರಿ (ಆಡಳಿತ ಸೌಧ ಎದುರು). ಬೆಳಿಗ್ಗೆ 9:30ಕ್ಕೆ ನಡೆಯಲಿದೆ.
ಕಾರ್ಮಿಕರ ಬೇಡಿಕೆಗಳು–
1) ಬಂದರುಗಳು, ಹಡಗು ಕಟ್ಟೆಗಳನ್ನು ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ನೀಡಬಾರದು.
2)ಮೀನುಗಾರಿಕೆಯಲ್ಲಿ ತೊಡಗಿರುವ ಎಲ್ಲಾ ಮನೆ ನಿವೇಶನ ಇಲ್ಲದ ಕುಟುಂಬಗಳಿಗೆ ಕೇರಳ ಮಾದರಿಯಲ್ಲಿ ಉಚಿತ ಮನೆ ನೀಡಬೇಕು
3)ವಿದೇಶಿ ಕಂಪನಿ, ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ಮೀನುಗಾರಿಕೆಗೆ ಅವಕಾಶ ನೀಡಬಾರದು. ಇದರಿಂದಾಗಿ ಆಳಸಮುದ್ರ ಮೀನುಗಾರಿಕೆಗೆ ಸಮಸ್ಯೆಗಳು ಉಂಟಾಗುತ್ತದೆ, ಈ ಕಾನೂನು ಕೇಂದ್ರ ಸರಕಾರ ವಾಪಾಸು ಪಡೆಯಬೇಕು
4)ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀನುಗಾರ ಕಾರ್ಮಿಕರ ಭದ್ರತೆಗೆ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಬೇಕು
5)ಆಟೋ ರಿಕ್ಷಾ ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿಗೆ ಅನುದಾನ ನೀಡಬೇಕು.
6)ಅಂಬೇಡ್ಕರ್ ಸಹಾಯ ಹಸ್ತದಲ್ಲಿ ಕಾರ್ಡ್ ಪಡೆದ ಎಲ್ಲಾ ಅಸಂಘಟಿತ ರಿಗೂ ಸೌಲಭ್ಯ ಜಾರಿಮಾಡಬೇಕು.
7)ಬೀಡಿ ಕಾರ್ಮಿಕರ ಕನಿಷ್ಠ ಕೂಲಿ ಸಮರ್ಪಕವಾಗಿ ಜಾರಿ ಮಾಡಬೇಕು.
8)ಬೀಡಿ ಕಾರ್ಮಿಕರ ಪಿಂಚಣಿ ರೂ. 9,000.00 ನೀಡಬೇಕು
9)ಅಂಗನವಾಡಿ ನೌಕರರನ್ನು ಖಯಂ ನೌಕರರೆಂದು ಪರಿಗಣಿಸಬೇಕು, ಗ್ರಾಚ್ಯುಟಿ ಹಣ ನೀಡಬೇಕು.
10)ಬಿಸಿ ಊಟ ನೌಕರರ ವೇತನ ಹೆಚ್ಚಳ ಮಾಡಬೇಕು ಮತ್ತು ಇಡಿಗಂಟು ಸಮರ್ಪಕವಾಗಿ ಜಾರಿಗೊಳಿಸಬೇಕು.
11)ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಾಜ್ಯದಿಂದ ಕೇಂದ್ರಕ್ಕೆ ವರ್ಗಾವಣೆ ಆಗುವ ಅಪಾಯವಿದೆ.
12)ಬಿಲ್ಡರ್‌ಗಳ ಅಡಿಯಲ್ಲಿ 10ಕ್ಕಿಂತ ಕಡಿಮೆ ಜನ ಕೆಲಸ ಮಾಡುತ್ತಿದ್ದರೆ ಕಟ್ಟಡ ಕೆಲಸ ಮಾಡುವ ಮಹಿಳಾ ಕರ್ಮಿಕರಿಗೆ ಹೆರಿಗೆ ಭತ್ಯೆ ಸಿಗುವುದಿಲ್ಲ. ಎಲ್ಲಾ ಕಾರ್ಮಿಕರಿಗೂ ಗ್ರಾಚ್ಯುಟಿ ಸಿಗುವುದಿಲ್ಲ.
13)ವಿಮೆಯಲ್ಲಿ ವಿದೇಶಿ ನೇರ ಬಂಡವಾಳದ ಮಿತಿಯನ್ನು ಶೇ. 100 ಹೆಚ್ಚಳಕ್ಕೆ ಅವಕಾಶ ನೀಡುವ ವಿಮಾ ಕಾನೂನುಗಳು (ತಿದ್ದುಪಡಿ) ಮಸೂದೆ ಬೇಡವೇ ಬೇಡ.
14)ಭಾರತೀಯ ಜೀವ ವಿಮಾ ನಿಗಮದಲ್ಲಿ 3 ಮತ್ತು 4ನೇ ದರ್ಜೆಯ ನೌಕರರ ನೇಮಕಾತಿ ಆಗಬೇಕು.
15)ಬ್ಯಾಂಕ್‌ಗಳಲ್ಲಿ ಖಾಲಿವಿರುವ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಬೇಕು.
16)ವಾರಕ್ಕೆ 5 ದಿನಗಳ ಬ್ಯಾಂಕಿಂಗ್ ಕೆಲಸ, ಬ್ಯಾಂಕ್‌ಗಳ ಖಾಸಗಿಕರಣಗೊಳಿಸುವ ಕ್ರಮವನ್ನು ಕೈಬಿಡಬೇಕು.
17)ಹಳೇಯ ಪಿಂಚಣಿಯನ್ನು ಜಾರಿಗೊಳಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಬಲಪಡಿಸಬೇಕು.
18)ಬ್ಯಾಂಕ್‌ಗಳಲ್ಲಿ ದುಡಿಯುವ ನೌಕರರು ಮತ್ತು ಅಧಿಕಾರಗಳ ಜೀವಕ್ಕೆ ರಕ್ಷಣೆ ನೀಡಬೇಕು.
ಕವಿರಾಜ್ ಎಸ್ ಕಾಂಚನ್- ಸಂಚಾಲಕರು, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಉಡುಪಿ ಜಿಲ್ಲಾ ಸಮಿತಿ, ಕೆ. ವಿಶ್ವನಾಥ – ಎ.ಐ.ಐ.ಇ.ಎ. , ಯು.ಶಿವಾನಂದ – ಎ.ಐ.ಟಿ.ಯು.ಸಿ. ,ಉಮೇಶ್ ಕುಂದರ್- ಸಿ.ಐ.ಟಿ.ಯು.,ಉಡುಪಿ, ಕಿರಣ್ ಹೆಗ್ಡೆ – ಇಂಟಕ್ (ಐ.ಎನ್.ಟಿ.ಯು.ಸಿ), ಸುನಿತಾ ಶೆಟ್ಟಿ – ಸಿ.ಐ.ಟಿ.ಯು,ಕಾರ್ಕಳ, ನಾಗೇಶ್ ನಾಯಕ್ – (ಎಐಬಿಇಎ), ರಾಮ ಕಾರ್ಕಡ – ಸಿ.ಐ.ಟಿ.ಯು.ಬ್ರಹ್ಮಾವರ ,ಚಂದ್ರಶೇಖರ್ ವಿ. – ಸಿ.ಐ.ಟಿ.ಯು.ಕುಂದಾಪುರ ,ರೊನಾಲ್ಡ್ ರಾಜೇಶ್ ಕ್ವಾಡ್ರಸ್ – ಸಿ.ಐ.ಟಿ.ಯು., ಬೈಂದೂರು .
ಈ ಬೃಹತ್ ಪ್ರತಿಭಟನೆಗೆ ಕಾರ್ಮಿಕ ಸಂಘಟನೆಗಳು ಉಡುಪಿ ಜಿಲ್ಲೆಯಾದ್ಯಂತ ಬೆಂಬಲಕ್ಕಾಗಿ ಮನವಿ ಮಾಡಿದೆ.

