ಉಡುಪಿ ಬನ್ನಂಜೆ ಶ್ರೀ ಶನಿ ಕ್ಷೇತ್ರ ; ಓಷಧ ಸೂಕ್ತ ಪುರಸ್ಪರ ಸಗ್ರಹಮಖ ಸಾಮೂಹಿಕ ಶನಿಶಾಂತಿ ಯಾಗ ಸಂಪನ್ನ

0
8

ಉಡುಪಿ 07  : ಉಡುಪಿ ಬನ್ನಂಜೆ ಶ್ರೀ ಶನಿ ಕ್ಷೇತ್ರ ದಲ್ಲಿ ನೆಲೆ ನಿಂತಿರುವ ಶ್ರೀ  ಶನಿ ದೇವರ  23 ಅಡಿ ಎತ್ತರದ ಏಕಶಿಲಾ ವಿಗ್ರಹದ ಸನ್ನಿಧಿಯಲ್ಲಿ ಪೂಜ್ಯ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿಯಲ್ಲಿಇಂದು ಶ್ರೀ ರಾಮ ವಿಠಲ್ ಹಾಗೂ ಶ್ರೀ ಶನೈಶ್ವರಸ್ವಾಮೀ  ಸನ್ನಿಧಿಯಲ್ಲಿ  ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ   ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು   ಅರ್ಚಕವೃಂದದವರು  ನೆರವೇರಿಸಿದರು.

ಶ್ರೀದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಓಷಧ ಸೂಕ್ತ  ಪುರಸ್ಪರ ಸಗ್ರಹಮಖ ಸಾಮೂಹಿಕ ಶನಿಶಾಂತಿ ಯಾಗ ನೆಡೆಯಿತು, ಯಾಗದ  ಪೂರ್ಣಾಹುತಿ  ಶ್ರೀ  ಶನೈಶ್ವರ ಸ್ವಾಮೀ ಉತ್ಸವ,ಪಲ್ಲಪೂಜೆ , ಮಹಾಪೂಜೆಯ ಬಳಿಕ  ಪ್ರಸಾದ ವಿತರಣೆ , ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ  ಸಾವಿರಾರು ಭಕ್ತರೊ ಭೋಜನ ಪ್ರಸಾದ ಸ್ವೀಕರಿಸಿದರು.

ನಾಡೋಜ ಡಾ ಜಿ ಶಂಕರ್  ದೇವಳಕ್ಕೆ ಭೇಟಿ ಸೇವೆ ನೀಡಿದ ಅವರನ್ನು ದೇವಳದ ವತಿಯಿಂದ ಗೌರವಿಸಲಾಯಿತು ,ದೇವಳದ ಪ್ರಧಾನ ಅರ್ಚಕರಾದ ಸತ್ಯನಾರಾಯಣ ಆಚಾರ್ಯ , ವಿಜಯಲಕ್ಷ್ಮೀ ಆಚಾರ್ಯ ,  ಯತೀಶ್ ಆಚಾರ್ಯ , ಪ್ರತೀಕ್ ಆಚಾರ್ಯ  ಹಾಗೂ ಟ್ರಸ್ಟನ ಪದಾಧಿಕಾರಿಗಳು , ನೂರಾರು ಭಕ್ತರೂ ಉಪಸ್ಥರಿದ್ದರು.             

LEAVE A REPLY

Please enter your comment!
Please enter your name here