ಉಡುಪಿ:ರಕ್ತದಾನ ಶಿಬಿರ

0
7

ಹೊಯ್ಗಿ ಚಾರಿಟೆಬಲ್ ಟ್ರಸ್ಟ್ (ರಿ.), ಜಯಂಟ್ಸ್ ಗ್ರೂಪ್ ಉಡುಪಿ, ಹಳೇ ವಿದ್ಯಾರ್ಥಿ ಸಂಘ, ನಾರ್ತ್ ಶಾಲೆ ಉಡುಪಿ, ಇವರು ರಕ್ತ ನಿಧಿ ಕೇಂದ್ರ, ಉಡುಪಿ ಸರಕಾರಿ ಜಿಲ್ಲಾಸ್ಪತ್ರೆ ಇವರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಆದಿತ್ಯವಾರ ನೆಡೆಯಿತು .


ಹೊಯ್ಗಿ ಟ್ರಸ್ಟ್ ನ  ಗಂಗಾಧರ ನಾಯಕ್,  ಇವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚೈತನ್ಯ ಸೋಶಿಯಲ್ ಫೌಂಡೇಷನ್ ಟ್ರಸ್ಟ್ ನ ಸಂಸ್ಥಾಪಕರಾದ  ಸುನಿಲ್ ಸಾಲಿಯಾನ್, ಜಯಂಟ್ಸ್ ಉಡುಪಿಯ ದಿವಾಕರ್ ಸಾಲಿಯಾನ್, ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ರಾವ್, ತೆಂಕಪೇಟೆ ವಾರ್ಡಿನ ನಗರಸಭಾ ಸದಸ್ಯರಾದ ಮಾನಸ ಪೈ, ಶಾಲಾ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಸಾವಿತ್ರಿ , ನ್ಯಾಷನಲ್ ಸೊಸೈಟಿಯ  ಸಿಇಒ ಚಿದಾನಂದ ಪೈ  , ವಿವಿಧ ಸಂಸ್ಥೆಯ ಪಧಾದಿಕಾರಿಗಳು  ಉಪಸ್ಥಿತರಿದ್ದರು.

ಸರ್ಕಾರಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ಮೆಡಿಕಲ್ ಆಫೀಸರ್ ಡಾ. ವೀಣಾಕುಮಾರಿ ರಕ್ತದಾನದ ಕುರಿತು ಮಾಹಿತಿ ನೀಡಿದರು.  ಶ್ರೀನಾಥ್ ಹಿರಿಯಡ್ಕ ಧನ್ಯವಾದಗೈದರು.

LEAVE A REPLY

Please enter your comment!
Please enter your name here