ವರಂಗ ವೀಣಾ ಆರ್‌ ಭಟ್‌ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ.

0
24


ವರಂಗ : ಸಮಾಜ ಸೇವಕಿ ಹೆಬ್ರಿ ತಾಲ್ಲೂಕಿನ ವರಂಗದ ವೀಣಾ ಆರ್‌ ಭಟ್‌ ಅವರಿಗೆ ಕರ್ನಾಟಕ ರಾಜ್ಯ ಸರಕಾರ ಸಮಾಜ ಸೇವೆಗೆ ಕೊಡಮಾಡುವ ” ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ” ಅವರಿಗೆ ಲಭಿಸಿದೆ.
ಶನಿವಾರ ಉಡುಪಿಯಲ್ಲಿ ನಡೆದ ರಾಜ್ಯೋತ್ಸವ ಸಂಭ್ರಮದಲ್ಲಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಆರ್‌ ಹೆಬ್ಬಾಳ್ಕರ್‌ ಪ್ರಶಸ್ತಿ ಪ್ರಧಾನ ಮಾಡಿದರು. ಕಳಸ ಚಂದ್ರಶೇಖರ ಭಟ್‌ ಮತ್ತು ಪಾರ್ವತಿ ಭಟ್‌ ಅವರ ಪುತ್ರಿಯಾಗಿರುವ ವೀಣಾ ಆರ್‌ ಭಟ್‌ ವರಂಗದ ರಾಮಚಂದ್ರ ಭಟ್‌ ಅವರ ಪತ್ನಿ.
ಮೂಡಿಗೆರೆ ತಾಲೂಕು ಬಾಳೆಹೊಳೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ, ಮೂಡಿಗೆರೆ ತಾಲೂಕು ಕಳಸ ಸಾಕ್ಷರತಾ ಆಂದೋಲನದ ಕಾರ್ಯಕರ್ತೆಯಾಗಿ, ಕಬ್ಬಿನಾಲೆ ಯುವತಿ ಮಂಡಲದ ಅಧ್ಯಕ್ಷೆಯಾಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆಯಾಗಿ, ವರಂಗ ಮಾತಿಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷೆಯಾಗಿ, ಹೆಬ್ರಿ ಮೈಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಸಂಚಾಲಕಿಯಾಗಿ, ಮುನಿಯಾಲು ಪ್ರಥಮ ದರ್ಜೆ ಕಾಲೇಜು ಇದರ ಕ್ಷೇಮಾಭಿವೃದ್ಧಿ ಸಮಿತಿಯ ಸದಸ್ಯೆಯಾಗಿ, ಹೆಬ್ರಿ ಜೇಸಿರೆಟ್ ಇದರ ಅಧ್ಯಕ್ಷೆಯಾಗಿ, ಹೆಬ್ರಿ ಅಮೃತ ಭಾರತಿ ಮಾತೃ ಮಂಡಳಿಯ ಅಧ್ಯಕ್ಷೆಯಾಗಿ, ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ, ಹೆಬ್ರಿ ತಾಲೂಕು ವಿಪ್ರ ಮಹಿಳಾ ವೇದಿಕೆ ಇದರ ಕಾರ್ಯದರ್ಶಿಯಾಗಿ, ವರಂಗ ಗ್ರಾಮ ಪಂಚಾಯತ್ ಇದರ ಕೊರೋನ ವಾರಿಯರ್ ಆಗಿ, ಇಂಟರ್ನ್ಯಾಷನಲ್ ಹೆಬ್ರಿ ಜೇಸಿಐ ಇದರ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ, ಜೇಸಿಐ ವಲಯ 15ರ ವಲಯ ನಿರ್ದೇಶಕಿಯಾಗಿ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಹೆಬ್ರಿ ಘಟಕ ಇದರ ಉಪಾಧ್ಯಕ್ಷೆಯಾಗಿ, ಹೆಬ್ರಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯೆಯಾಗಿ, ಹೆಬ್ರಿ ಚೈತನ್ಯ ಮಹಿಳಾ ವೃಂದ ಇದರ ಸದಸ್ಯೆಯಾಗಿ, ಹೆಬ್ರಿ ತಾಲೂಕು ಗ್ರಾಮ ವಿಕಾಸ ಕೇಂದ್ರ ಇದರ ತಾಲೂಕು ಸಂಯೋಜಕಿಯಾಗಿ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.

2019 ರಲ್ಲಿ ಜೇಸಿ ವಲಯ 15ರ “ಸಾಧನಶ್ರೀ” ಪ್ರಶಸ್ತಿ, 2020 ರಲ್ಲಿ ಹೆಬ್ರಿ ಸಿಟಿ ಲಯನ್ಸ್ ಕ್ಲಬ್‌ನಿಂದ “ಗೌರವ ಪುರಸ್ಕಾರ” , 2021 ರಲ್ಲಿ ಹೆಬ್ರಿ ಜೇಸಿಐಇಂದ “ ಕಮಲಪತ್ರ ” ಪ್ರಶಸ್ತಿ, 2022 ರಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಹೆಬ್ರಿ ಜೇಸಿರೆಟ್ ವತಿಯಿಂದ “ಗೌರವ ಪುರಸ್ಕಾರ”, 2023 ರಲ್ಲಿ ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ “ ಗೌರವ ಪುರಸ್ಕಾರ ”, 2024 ರಲ್ಲಿ ಹೆಬ್ರಿ ತಾಲೂಕು ಮಡಾಮಕ್ಕಿ ಮಾತೃಮಂಡಳಿ ವತಿಯಿಂದ “ಗೌರವ ಪುರಸ್ಕಾರ”, 2025 ರಲ್ಲಿ ಪ್ರತಿಷ್ಠಿತ “ಕೋಟ ಶಿವರಾಮ ಕಾರಂತ ಪ್ರಶಸ್ತಿ” ಸಹಿತ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.

LEAVE A REPLY

Please enter your comment!
Please enter your name here