ಉಡುಪಿ: ಕಂದಾಯ ಇಲಾಖೆ ನಿಯಮದಡಿ ಹತ್ತಾರು ಸಮಸ್ಯೆ; ಪರಿಹಾರಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯ

0
29

ಉಡುಪಿ: ಜಿಲ್ಲೆಯ ನಗರ ಸಭೆಯಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಸ್ಥಳ ಅಕ್ರಮ ಸಕ್ರಮ ಮಂಜೂರಾತಿಗೆ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು, 94 ಸಿ. ಮತ್ತು 94 ಸಿಸಿ, ನಿಯಮದಡಿ ಅರ್ಜಿ ಮರು ಸಲ್ಲಿಕೆಗೆ ಅವಕಾಶ ನೀಡಬೇಕು, ಗ್ರಾಮ ಪಂಚಾಯಿತಿ ವ್ಯಾಪ್ತಿಯ 9&11 ಎ ಏಕ ನಿವೇಶನ 25 ಸೆಂಟ್ಸಿನ ಒಳಗಡೆ ಇರುವಂತಹ ಜಾಗಗಳಿಗೆ ಹಿಂದೆ ಇದ್ದ ನಿಯಮಾವಳಿ ಪ್ರಕಾರ ಅನುಮೋದನೆ ನೀಡಬೇಕು , 11.ಬಿ ನಿಯಮಾವಳಿ ಯಿಂದ ಕೂಡ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ ಹಿಂದಿನ ರೀತಿಯಲ್ಲಿ ಕ್ರಮ ಜರುಗಿಸಬೇಕು ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ದಲ್ಲಿ ಏಕ ನಿವೇಶನದ ಸಾವಿರಾರು ಅರ್ಜಿ ಬಾಕಿ ಇರುವುದರಿಂದ ಉಡುಪಿ ಯ ಜನರಿಗೆ ತುಂಬಾ ಸಮಸ್ಯೆ ಉಂಟಾಗಿರುತ್ತದೆ. ಕೂಡಲೇ ಸಮಸ್ಯೆ ಪರಿಹಾರಕ್ಕೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ರವರಿಗೆ ತುಳುನಾಡ ರಕ್ಷಣಾ ವೇದಿಕೆ ಮನವಿ ನೀಡಿ ಒತ್ತಾಯಿಸಿದೆ.

ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಮಹಿಳಾ ಜಿಲ್ಲಾಧ್ಯಕ್ಷೆ ಸುನಂದ ಕೋಟ್ಯಾನ್ ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಬಾಣಬೆಟ್ಟು , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ, ಐ.ಟಿ. ಸೆಲ್ ಜಿಲ್ಲಾ ಮುಖ್ಯಸ್ಥರು ಸತೀಶ್ ಪೂಜಾರಿ ಕೀಳಂಜೆ, ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ , ಜಿಲ್ಲಾ ಜೊತೆ ಕಾರ್ಯದರ್ಶಿ ಪ್ರೀತಮ್ ಡಿಕೋಸ್ಥಾ, ತುರವೇ ಮುಖಂಡರುಗಳಾದ ನಿರ್ಮಲಾ. ಎಂ. ಮೆಂಡನ್ , ಅಜಯ್ ,ಗುಣಕರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here