ಉಡುಪಿ : ಹಣ ಮರುಪಾವತಿ ನೆಪದಲ್ಲಿ ಮೋಸ

0
21

ಉಡುಪಿ : ಆನ್‌ಲೈನ್‌ ಮೂಲಕ ಇ-ಕಾಮರ್ಸ್‌ ಸಂಸ್ಥೆಯೊಂದರಲ್ಲಿ 8 ಬಾಕ್ಸ್‌ ಬಲ್ಬ್‌ ಬುಕ್‌ ಮಾಡಿದ ವ್ಯಕ್ತಿಗೆ 1 ಬಾಕ್ಸ್‌ ಬಲ್ಬ್‌ ಮಾತ್ರ ಕಳುಹಿಸಿ, ಅದನ್ನು ವಿಚಾರಿಸುವ ವೇಳೆ ವ್ಯಕ್ತಿಯೊಬ್ಬರು 71,035 ರೂ. ವಂಚಿಸಿರುವ ಘಟನೆ ನಡೆಸಿದೆ.

ಕಲ್ಸಂಕ ನಿವಾಸಿ ಮನೋಜ್‌ ನಿಕೋಲಸ್‌ (64) ಅವರು ಫ್ಲಿಪ್‌ ಕಾರ್ಟ್‌ ನಿಂದ 8 ಬಾಕ್ಸ್ ಬಲ್ಬ್ ಗಳನ್ನು 1,517 ರೂ.ಗಳಿಗೆ ಆರ್ಡರ್ ಮಾಡಿದ್ದು, ಫೆ.9ರಂದು 1 ಬಾಕ್ಸ್ ಮಾತ್ರ ಡೆಲಿವೆರಿ ಆಗಿತ್ತು. ಮನೋಜ್‌ ಅವರು ಡೆಲಿವರಿ ಬಾಯ್ ಬಳಿ ಉಳಿದ 7 ಬಾಕ್ಸ್‌ಗಳ ಬಗ್ಗೆ ವಿಚಾರಿಸಿದಾಗ ಆತನು ಫ್ಲಿಪ್ ಕಾರ್ಟ್ ಗೆ ದೂರು ಹಾಕುವಂತೆ ಹೇಳಿದ್ದ. ಅನಂತರ ಫ್ಲಿಪ್ ಕಾರ್ಟ್‌ ನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದಾಗ ಯಾವುದೇ ಸಂಪರ್ಕ ಆಗದ ಕಾರಣ, ಗೂಗಲ್‌ ನಲ್ಲಿ ಫ್ಲಿಪ್ ಕಾರ್ಟ್ ಕಸ್ಟಮರ್‌ ಕೇರ್‌ ಎಂಬುದಾಗಿ ಸರ್ಚ್ ಕೊಟ್ಟಾಗ ಒಂದು ನಂಬರ್ ಬಂದಿದ್ದು, ಅದಕ್ಕೆ ಕರೆ ಮಾಡಿದಾಗ ಯಾರೂ ಸಹ ಕರೆ ಸ್ವೀಕರಿಸಿಲ್ಲ.

ಅನಂತರ ಅಲ್ಲಿಂದಲೇ ದೀಪಕ್ ತ್ರಿಪಾಠಿ ಎಂಬವನು ಕರೆ ಮಾಡಿ ಹಿಂದಿಯಲ್ಲಿ ಮಾತನಾಡಿ ಮರುಪಾವತಿ ಮಾಡುವುದಾಗಿ ಹೇಳಿ ಜಿಪೇ ಮುಖಾಂತರ ಈ rf 99000 ನಂಬರ್‌ ನಮೂದಿಸಲು ತಿಳಿಸಿದ್ದರು. ಅದರಂತೆ ಮನೋಜ್‌ ಅವರು ನಿರ್ದಿಷ್ಟ ನಂಬರ್‌ ನಮೂದಿಸಿದ್ದರು. ತತ್‌ಕ್ಷಣವೇ ಅವರ ಖಾತೆಯಿಂದ 71,035 ರೂ.ಗಳು ಹೋಗಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here