ಉಡುಪಿ: ಅಖಿಲ ಭಾರತ ದೈವಾರಾಧಕರ ಒಕ್ಕೂಟ (ರಿ.) ಕೇಂದ್ರೀಯ ಉಡುಪಿ ಜಿಲ್ಲೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಉಡುಪಿ ತೆಂಕುಪೇಟೆ ಬೊಬ್ಬರ್ಯ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಒಕ್ಕೂಟದ ಗೌರವಾಧ್ಯಕ್ಷರು, ಬೊಬ್ಬರ್ಯ ಸೇವಾ ಸಮಿತಿಯ ಗೌರವಾಧ್ಯಕ್ಷರಾಗಿರುವ ಕ್ಷೇತ್ರದ ಮುಕ್ಕಾಲ್ದಿಯಾದ ಚಂದ್ರಶೇಖರ್ ಶೆಟ್ಟಿ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನೋದ್ ಶೆಟ್ಟಿ ವಹಿಸಿದ್ದರು.
ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮ, ದೈವಸ್ಥಾನ ಸ್ವಚ್ಛತಾ ಆಂದೋಲನ, ಒಕ್ಕೂಟದ ಸದಸ್ಯರಿಗೆ ಅಂಚೆ ಇಲಾಖೆಯಿಂದ ಅಪಘಾತ ವಿಮೆ ನೊಂದಣಿ ಕಾರ್ಯಕ್ರಮ ಜರಗಿತ್ತು. ರಾಮದಾಸ್ ಸಾಲಿಯನ್ ಹಾಗೂ ಈಶ್ವರ ಪಾಣಾರ ಹಾಗೂ ಸುಂದರ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು.
ಒಕ್ಕೂಟದ ಕೇಂದ್ರೀಯ ಅಧ್ಯಕ್ಷರಾದ ವಿನೋದ್ ಶೆಟ್ಟಿ, ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ , ಉದಯ ಮೆಂಡನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ವಾಸು ಸೇರಿಗಾರ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ, ವಿಜಯ ಮಡಿವಾಳ, ಶ್ಯಾಮ್, ರವಿ, ಸಮಿತ ಶೆಟ್ಟಿ , ಭವಿಷ್, ರಮೇಶ್ ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

