ಉಡುಪಿ ಇಂಡಸ್ಟ್ರಿ ಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಕಿನ್ನಿಮುಲ್ಕಿ ಉಡುಪಿ ಇದರ ಮುಂದಿನ 5 ಸಹಕಾರಿ ವರ್ಷಕ್ಕೆ ಪದಾಧಿಕಾರಿಗಳ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಅರುಣ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ಎಂ. ಗಣೇಶ್ ಕಿಣಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಿರ್ದೇಶಕರಾಗಿ ರಮಾನಂದ ಭಟ್, ನಾರಾಯಣ ಬಲ್ಲಾಳ್, ಎಲ್. ಉಮಾನಾಥ್, ದೇವದಾಸ್ ಶೆಟ್ಟಿಗಾರ್, ಯಶವಂತ ನಾಯಕ್, ರಾಧಾಕೃಷ್ಣ ಶೆಣೈ, ಮೀನಾ ಕುಮಾರಿ ಯು, ಶ್ವೇತಾ ಜೆ ಶೆಟ್ಟಿ, ಅಬ್ದುಲ್ಲಾ ಎಚ್. ಸಾಹೇಬ್, ಅರುಣ್ ಟಿ ಶೆಟ್ಟಿ, ಸುರೇಶ್ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಈ ಚುನಾವಣಾ ಪ್ರಕ್ರಿಯೆಯನ್ನು ಕೆ. ಆರ್. ರೋಹಿತ್ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರ ಕಚೇರಿ, ಉಡುಪಿ ನೆರವೇರಿಸಿಕೊಟ್ಟರು. ಸಂಘದ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ಹೆಗ್ಡೆ ಸಹಕರಿಸಿದರು.

