ಉಡುಪಿ ಕಡಿಯಾಳಿ ಮಾತೃ ಮಂಡಳಿಯ ವತಿಯಿಂದ ಶ್ರೀ ಮಹಿಷಾಮರ್ದಿನಿ ದೇವರ ಸನ್ನಿಧಿಯಲ್ಲಿ ಶುಕ್ರವಾರ 41 ನೇ ವರ್ಷದ ಸಾಮೂಹಿಕ ವರ ಮಹಾಲಕ್ಷ್ಮೀ ಪೂಜೆ ನಡೆಯಿತು, ವೇದಮೂರ್ತಿ ಪಾಡಿಗಾರು ಶ್ರೀನಿವಾಸ್ ತಂತ್ರಿಗಳ ನೇತೃತ್ವದಲ್ಲಿ ಅರ್ಚಕ ವೃಂದದವರು ಧಾರ್ಮಿಕ ಪೂಜಾ ಕಾರ್ಯ ನಡೆಸಿಕೊಟ್ಟರು., ಶ್ರೀದೇವರಿಗೆ ವಿಶೇಷ ಅಲಂಕಾರ ,ವಿಶೇಷವಾಗಿ ರಚಿಸಿದ ಮಂಡಲದಲ್ಲಿ ಕಳಶ ಪ್ರತಿಷ್ಠೆ, ಸಮೂಹಿಕ ಕುಂಕುಮ ಅರ್ಚನೆ , ಲಲಿತಾ ಸಹಸ್ರ ನಾಮ ಪಠಣೆ, ಮಹಾಪೂಜೆ ದೋರ ಗ್ರಂಥಿ ಸಹಿತ ಪ್ರಸಾದ ವಿತರಣೆ ನಡೆಯಿತು. ಧಾರ್ಮಿಕ ಸಭಾ ಕಾರ್ಯದಲ್ಲಿ ಉಡುಪಿ ಶಾಸಕರಾದ ಯಶಪಾಲ್ ಸುವರ್ಣ, ದೇವಳದ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ವಿಜಯ ರಾಘವೇಂದ್ರ , ಸಮಾಜ ಸೇವಕಿ ಪೂರ್ಣಿಮಾ ಸುರೇಶ್ ನಾಯಕ್ , ಮಾತೃ ಮಂಡಳಿಯ ಪ್ರಮುಖರಾದ ಸುಪ್ರಭಾ ಆಚಾರ್ಯ, ಪದ್ಮಾ ರತ್ನಾಕರ್, ಜ್ಯೋತಿ ಪೈ , ಜಯಶ್ರೀ ಶೇಟ್ ಹಾಗೂ 500 ಕ್ಕೂ ಹೆಚ್ಚಿನ ಮುತೈದೆಯರು ಹಾಗೂ ಮಂಡಳಿಯ ಸದಸ್ಯರು ಉಪಸ್ಥರಿದ್ದರು.