ಉಡುಪಿ: ಸಿಟಿ ಬಸ್ ನಿಲ್ದಾಣದ ಬಳಿಯ ಹೋಟೆಲ್ ಬೃಂದಾವನ ಕಟ್ಟಡದಲ್ಲಿ” ಕೌಶಲ ” ನವೀಕೃತ ವಿಸ್ತೃತ ಲೋಹಶಿಲ್ಪ ಮಳಿಗೆ ಶನಿವಾರ ಉದ್ಘಾಟನೆ ಗೊಂಡಿತ್ತು ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ದೀಪ ಬೆಳಗಿಸಿ ಉದ್ಘಾಟಿಸಿದರು , ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ಸಾಂಪ್ರದಾಯಿಕ ಲೋಹಗಳ ಶಿಲ್ಪ ಕಲೆಗಳ ಮೂರ್ತಿ ತಯಾರಿಕೆಯಲ್ಲಿ ಕೌಶಲ ಸಂಸ್ಥೆ ಪ್ರಸಿದ್ಧ ಪಡೆದಿದೆ , ಇಲ್ಲಿ ದೇವರ ,ದೈವಗಳ ಮುಖ ಮೂರ್ತಿ , ತಯಾರಿಸಿ ಉಡುಪಿ ಮಾತ್ರ ವಲ್ಲ , ದೇಶ ವಿದೇಶಗಳಲ್ಲಿ ಪ್ರಸಿದ್ಧ ಪಡೆಯಲಿ ಎಂದು ಶುಭ ಹಾರೈಸಿದರು ಮುಖ್ಯ ಅತಿಥಿಗಳಾಗಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ ದೈವಸ್ಥಾನದ ನವೀಕರಣ ಗೊಂಡಾಗ ಅದಕ್ಕೆ ಬೇಕಾದ ಎಲ್ಲಾ ಬಗೆಯ ಲೋಹದ ಮೂರ್ತಿಗಳ ಒಂದೇ ಸೂರಿನ ಅಡಿಯಲ್ಲಿ ಸಿಗುವ ಏಕೈಕ ಮಳಿಗೆಯಾಗಿ ಪ್ರಸಿದ್ಧ ಪಡೆದು ಸನಾತನ ಧರ್ಮ ಬೆಳೆಯಲು ಪೂರಕವಾಗಿದೆ ಎಂದು ಶುಭ ಹಾರೈಸಿದರು , ಜಾನಪದ ವಿದ್ವಂಸರಾದ ಬಾಬು ಅಮೀನ್ , ಬೃಂದಾವನ ಕಟ್ಟಡದ ಮಾಲಕಾರದ ಹುಸೈನಾರ್ ಶಿರಸಿ , ಸಮಾರಂಭದ ಅಧ್ಯಕ್ಷತೆಯನ್ನು ಶಿಲ್ಪಗುರು ಲಕ್ಷ್ಮೀ ನಾರಾಯಣ ಆಚಾರ್ಯ ವಹಿಸಿದರು ,ಸಂಸ್ಥೆಯ ಪಾಲುದಾರದ ಶ್ರೀಮತಿ ರಾಧಮ್ಮ ರಾಘವ ಆಚಾರ್ಯ , ಸಂಸ್ಥೆಯ ಮಾಲಕರಾದ ರಾಜೇಶ್ ಆಚಾರ್ಯ ಸ್ವಾಗತಿಸಿದರು , ನರೇಂದ್ರ ಕೋಟ ನಿರೊಪಿಸಿ , ವಂದಿಸಿದರು

