ಪಾಶ್ಚಾತ್ಯ ರ ಟ್ರೆಂಡ್ ಗೆ ಬಲಿಯಾಗದೆ ಜೀವನದಲ್ಲಿ ತುಳುನಾಡೆಂಬ “ಬ್ರಾಂಡ್ ಅಳವಡಿಸಿಕೊಳ್ಳಿ: ಸಂತೋಷ್ ನಂಬಿಯಾರ್
ಉಡುಪಿ : ಇಂದಿನ ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಯ ಬದುಕಿಗೆ ಮಾರು ಹೋಗದೆ ತುಳುನಾಡಿನ ವೃೆಭವದ ಸಂಸ್ಕೃತಿಯನ್ನು ಅಳವಡಿಸಿ ಕೊಂಡು ಆರೋಗ್ಯಕರ ಬದುಕನ್ನು ಸಾಗಿಸ ಬೇಕಾಗಿದೆ. ಧನ್ವಂತರಿ ಶಕ್ತಿ ತುಂಬಿದ ತುಳುನಾಡಿನ ಆಹಾರ ಪದ್ದತಿಯನ್ನು ಮರೆತು, ವಿಷಪೂರಿತ ರೋಗಕಾರಕ ಆಹಾರವನ್ನೂ ಉಪಯೋಗಿಸುವ ಮೂಲಕ ಅಲ್ಪಾವಧಿ ಬದುಕಿಗೆ ಕಾರಣಿಕರ್ತರಾಗಿದ್ದೇವೆ. ಅಂದಿನ ಕಾಲದಲ್ಲಿ ಜಾತಿ, ಮತ ಧರ್ಮವನ್ನು ಮೀರಿ ಸಾಮರಸ್ಯದ ಜೀವನ ಸಾಗಿಸುತಿದ್ದ ತುಳುನಾಡಿನ ಜನತೆ, ಇಂದು ಎಲ್ಲವನ್ನು ದೂರ ಸರಿಸಿ ಏಕ ಕುಟುಂಬದಲ್ಲಿ ಬದುಕುತಿದ್ದಾರೆ ಎಂದು ಯುವ ತುಳು ಜಾನಪದ ಚಿಂತಕ ಸಂತೋಷ್ ನಂಬಿಯಾರ್ ಹೇಳಿದರು.
ಅವರು ಉಡುಪಿ ಕುಂಜಿಬೆಟ್ಟು ವಿನ ಸೇರಾ ಕೇರ್ ವತಿಯಿಂದ ನಡೆದ ಆಟಿಡೊಂಜಿದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತುಳು ಜಾನಪದ ಚಿಂತಕ ಸಂತೋಷ್ ನಂಬಿಯಾರ್ , ಸಮಾಜ ಸೇವಕರಾದ ರಚನ್ ಸಾಲ್ಯಾನ್ , ಸಂತೋಷ್ ಪಡುಬಿದ್ರಿ, ಕೃಷಿಕರಾದ ಮಹಾಬಲ ಶೆಟ್ಟಿ ರವನ್ನು ಸನ್ಮಾನಿಸಿ ಗೌರವಿಸಲಾಯಿತು..
ಉಡುಪಿ ಕುಂಜಿಬೆಟ್ಟು ವಿನ ಸೇರಾಕೇರ್ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದರು.
ತುಳುನಾಡ ವೃಭವ ನೃತ್ಯ ಕಾರ್ಯಕ್ರಮವನ್ನು ಸಂಸ್ಥೆಯ ಸಿಬ್ಬಂದಿಗಳಾದ ಸುಪ್ರೀತಾ ಬಳಗದ ವತಿಯಿಂದ ನಡೆಯಿತು.. ಕಾರ್ಯಕ್ರಮದ ವಿಶೇಷತೆಯಾಗಿ ಆಟಿ ಕಳಂಜ ರೂಪಕವನ್ನು ವಿಶಾಲ್ ಆಚಾರ್ಯ ನಡೆಸಿ ಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಹಾಬಲ ಶೆಟ್ಟಿ , ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ತುಳುನಾಡ ಕಲಾವಿದರು (ರಿ.) ಪಡುಬಿದ್ರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ ಉಪಸ್ಥಿತರಿದ್ದರು. ಪ್ರದೀಪ್ ಕುಮಾರ್ ಸ್ವಾಗತಿಸಿ, ಲಕ್ಷ್ಮೀತಾ ನಿರೂಪಿಸಿ ವಂದಿಸಿದರು.