ಉಡುಪಿ : ಮಲ್ಹಾರ್ ಫ್ಯಾಷನ್ ಮೇಳ–2026 ಹಾಗೂ ಬೃಹತ್ ಮಾರಾಟವು ಜನವರಿ 10 ಮತ್ತು 11 ರಂದು ಬೆಳಿಗ್ಗೆ 11:00 ರಿಂದ ರಾತ್ರಿ 8:30 ರವರೆಗೆ ಉಡುಪಿ ನಗರದ ಡಯಾನಾ ಹೋಟೆಲ್, ಜೋಡುಕಟ್ಟೆ ರಸ್ತೆ ಆವರಣದಲ್ಲಿ ನಡೆಯಲಿದೆ.
ಈ ಫ್ಯಾಷನ್ ಮೇಳದಲ್ಲಿ ಬ್ರಾಂಡೆಡ್ ಸೀರೆಗಳು, ಸಲ್ವಾರ್‌ಗಳು, ಕುರ್ಥಿಗಳು, ಪರ್ಫ್ಯೂಮ್‌ಗಳು, ಮಫಿನ್ ಕೇಕ್‌ಗಳು, ಬ್ಯಾಗ್‌ಗಳು, ಬೆಡ್‌ಶೀಟ್‌ಗಳು ಸೇರಿದಂತೆ ಹಲವು ವಿಧದ ಆಕರ್ಷಕ ಮತ್ತು ಗುಣಮಟ್ಟದ ಬ್ರಾಂಡೆಡ್ ವಸ್ತುಗಳು ಲಭ್ಯವಿರಲಿವೆ.
ಮೊದಲ ಬಾರಿಗೆ ಎಲ್ಲಾ ಬ್ರಾಂಡೆಡ್ ಸಲ್ವಾರ್‌ಗಳು, ಸೀರೆಗಳು, ಕೇಕ್‌ಗಳು, ಮಫಿನ್‌ಗಳು, ಪರ್ಫ್ಯೂಮ್‌ಗಳು ಹಾಗೂ ಫ್ಯಾಷನ್ ಪರಿಕರಗಳನ್ನು ಸಮಂಜಸವಾದ ಹಾಗೂ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಒದಗಿಸಲಾಗುತ್ತಿದೆ. ಫ್ಯಾಷನ್ ಮತ್ತು ಖರೀದಿಗೆ ಆಸಕ್ತರಾದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಮಲ್ಹಾರ್ ಫ್ಯಾಷನ್ ಮೇಳವು ಉಡುಪಿಯ ಗ್ರಾಹಕರಿಗೆ ಒಂದೇ ಸ್ಥಳದಲ್ಲಿ ವಿವಿಧ ಬ್ರಾಂಡೆಡ್ ಉತ್ಪನ್ನಗಳನ್ನು ಖರೀದಿಸುವ ಉತ್ತಮ ಅವಕಾಶವನ್ನು ನೀಡಲಿದೆ.
ವರದಿ: ವಿನೋದ್ ಶೆಟ್ಟಿ, ಉಡುಪಿ.

