ಉಡುಪಿ:ರಾಷ್ಟ್ರೀಯ ಮಾನವ ಹಕ್ಕುಗಳು ಮಹಿಳಾ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಉನ್ನತಿ ಸಂಸ್ಥೆಯ ಉಡುಪಿ ವಲಯ ಕಾರ್ಯದರ್ಶಿಗಳಾಗಿ ಮಂಜುಳಾ ಡಿ ನಾಯಕ್ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಉದ್ದೇಶಗಳ ಜಾಗೃತಿ ಕಾರ್ಯಕ್ರಮ ಉಡುಪಿಯ ಓಶಿಯನ್ ಪರ್ಲ್ ಹೋಟೆಲ್ ನಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಉಡುಪಿ ವಲಯದ ಜಂಟಿ ನಿರ್ದೇಶಕ ರಮಣಾನಂದ ನಾಯಕ್, ಉದ್ಯಮಿ ವಿಜಯಲಕ್ಷ್ಮಿ ಮಲ್ಲಿ ಮಂಗಳೂರು, ಮಾನಸಿಕ ಆರೋಗ್ಯ ಸಲಹೆಗಾರ ಡಾಕ್ಟರ್ ನಿರಂಜನ್ ಶೆಟ್ಟಿ, ಡಾಕ್ಟರ್ ಸಂಧ್ಯಾ ಉಪಾಧ್ಯಾಯ, ಶ್ರೀಮತಿ ನಿಶಿತಾ ಶೆಟ್ಟಿ, ವಿಜಯ ಪೂಜಾರಿ, ಸೌಮ್ಯ ಲತಾ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.