ರಂಗಭೂಮಿ ಉಡುಪಿ ಸಂಸ್ಥೆಯ ವತಿಯಿಂದ ಮಾ.27ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ ದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ -2026ನ್ನು ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಖ್ಯಾತ ವೈದ್ಯರೂ ಆಗಿರುವ ರಂಗಭೂಮಿ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ರಾಗಿದ್ದ ಡಾ.ಅಮ್ಮುಂಜೆ ಅರವಿಂದ ನಾಯಕ್ ಅವರಿಗೆ ‘ವಿಶ್ವ ರಂಗಭೂಮಿ ಸನ್ಮಾನ’ಕಾರ್ಯಕ್ರಮ ರಂಗೂಭೂಮಿ ವತಿಯಿಂದ ನಡೆಯಲಿದೆ. ಸಂಜೆ 6:00ಕ್ಕೆ ಪ್ರಾರಂಭಗೊಳ್ಳುವ ಕಾರ್ಯಕ್ರಮ ಸಭಾಧ್ಯಕ್ಷತೆಯನ್ನು ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ವಹಿಸಲಿದ್ದಾರೆ.
ಕವಿ, ಕಥೆಗಾರ, ವಿಮರ್ಶಕ ಬೆಳಗೋಡು ರಮೇಶ್ ಭಟ್ ಅವರು ವಿಶ್ವ ರಂಗಭೂಮಿ ದಿನದ ಆಶಯ ನುಡಿಗಳನ್ನಾ ಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಉದ್ಯಮಿ ಜಲಾಲುದ್ದೀನ್ ಅಬ್ಬಾಸ್ ಹಾಗೂ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ವನಿತಾ ಮಯ್ಯ ಭಾಗವಹಿಸಲಿದ್ದಾರೆ.
ರಂಗಭೂಮಿ ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರ ಉಪಸ್ಥಿತಿ ಯೊಂದಿಗೆ ನಡೆಯುವ ಸಭಾ ಕಾರ್ಯ ಕ್ರಮದ ಬಳಿಕ ಕುಂಜಿಬೆಟ್ಟು ಟಿ.ಎ. .ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ತಂಡದಿಂದ ರಂಗಭೂಮಿ ರಂಗ ಶಿಕ್ಷಣ ಅಭಿಯಾನದ ನಾಟಕ ‘ತಾರೆ’ ಪ್ರದರ್ಶನಗೊಳ್ಳಲಿದೆ ಎಂದು ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

