ಉಡುಪಿ ನಗರಸಭೆ ವತಿಯಿಂದ ನೂತನವಾಗಿ ಅಳವಡಿಸಿದ ಇ -ಆಫೀಸ್ ನ್ನು ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ ಉದ್ಘಾಟನೆ ನೆರವೇರಿಸಿದರು.
ಹಲವುಕಚೇರಿಗಳಲ್ಲಿ ಇ -ಆಫೀಸ್ ಕೇಂದ್ರವನ್ನು ತೆರೆಯಲಾಗಿದೆ , ಈ ನಿಟ್ಟಿನಲ್ಲಿ ಉಡುಪಿ ನಗರಸಭೆಯು ಇ -ಆಫೀಸ್ ತಂತ್ರಾ೦ಶ ಅಳವಡಿಕೆಯಿಂದಾಗಿ ಯಾವುದೇ ಕಡತವು ಸಂಪೂರ್ಣವಾಗಿ ಪೇಪರ್ ಮುಕ್ತವಾಗಿ ಕಾರ್ಯನಿರ್ವಹಿಸಲಿದೆ , ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಮೊಬೈಲ್ ನಂಬರ್ ಜೊತೆಗೆ ಇ ಮೈಲ್ ಐ ಡಿ ಕಡ್ಡಾಯ ವಾಗಿ ನಮೂದಿಸುವುದು , ನಮೂದಿಸಿದ್ದಲ್ಲಿ ಕಡತ ಸಂಖ್ಯೆ ನಿರ್ವಹಣೆ ಸುಲಭವಾಗುತ್ತದೆ, ಈ ನೂತನ ಸೌಲಭ್ಯವನ್ನು ಇಂದಿನಿಂದಲೇ ಉಪಯೋಗಿಸಿ ಕೊಳ್ಳುವಂತೆ ಕರೆನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ರಜನಿ ಹೆಬ್ಬಾರ್ , ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಸುಂದರ್ ಕಲ್ಮಾಡಿ , ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ , ನಗರಸಭಾ ಸದಸ್ಯರಾದ ಟಿ.ಜಿ ಹೆಗ್ದೆ , ಬಾಲಕೃಷ್ಣ ಶೆಟ್ಟಿ , ರಶ್ಮಿ ಸಿ. ಭಟ್ , ಸವಿತಾ ಹರೀಶ್ ರಾಮ್ , ಮಂಜುನಾಥ್ ಮಣಿಪಾಲ್, ಅಧಿಕಾರಿಗಳಾದ ರಾಜೇಶ್, ಸುಧಾಕರ್ ಹಾಗೂ ವಿವಿಧ ವಾರ್ಡಿನ ನಗರಸಭಾ ಸದಸ್ಯರು ಹಾಗೂ ನಗರಸಭೆಯ ಅಧಿಕಾರಿಗಳು , ಸಿಬ್ಬಂದಿಗಳು ಉಪಸ್ಥಿತರಿದ್ದರು.

