ಸ್ವರಾಜ್ಯ ೭೫ ತಂಡ ದ 37ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾಯ೯ಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮಣಿಪಾಲ ಜ್ಞಾನಸುಧಾ ಪದವಿ ಪೂವ೯ ಕಾಲೇಜು ವಿದ್ಯಾನಗರ, ಹಸ್ತ ಚಿತ್ರ ಫೌಂಡೇಶನ್ (ರಿ) ವಕ್ವಾಡಿ,ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ,ಉಸಿರು ಕೋಟ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕಾಯ೯ಕ್ರಮ ನಮ್ಮೊಂದಿಗೆ (“ಸ್ವರಾಜ್ಯ ೭೫ ತಂಡದೊಂದಿಗೆ) ಯಶಸ್ವಿಗೊಳಿಸಲಾಯಿತು.
ಕಾಯ೯ಕ್ರಮದ ಮೊದಲಿಗೆ ಮಣಿಪಾಲ ಜ್ಞಾನಸುಧಾ ಪದವಿ ಪೂವ೯ ಕಾಲೇಜು ವಿದ್ಯಾನಗರ ಪ್ರಾಂಶುಪಾಲರಾದ ಶ್ರೀ ಗಣೇಶ್ ಶೆಟ್ಟಿ ಇವರು ರಾಷ್ಟ್ರ ಧ್ವಜಕ್ಕೆ ಪುಷ್ಪಾಚ೯ನೆಯನ್ನು ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನೆರೆದ ಗಣ್ಯರು ಪುಷ್ಪಾರ್ಚನೆಗೈದರು.
ಕಾಯ೯ಕ್ರಮದಲ್ಲಿ ಚಿಂತಕರು ಅರವಿಂದ ಚೊಕ್ಕಾಡಿ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಅನಾವರಣ ಮಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ವಿನೀತ್ ರಾವ್ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಗರ ಕೊಡುಗೆಯೊಂದಿಗೆ ಆರ್ ಎಸ್ ಶೇಣೈಯವರ ಸೇವೆ ವಿಚಾರವನ್ನೂ ತಿಳಿಸಿದರು.
ಗಣ್ಯರಾಗಿ ಸೈಯ್ಯದ್ ಸಿರಾಜ್ ಅಹಮದ್, ರವಿ.ಜಿ ನರಸಿಂಹ ಮೂತಿ೯ ,ಪ್ರೇಮಾನಂದ ಶೆಣೈ,ದೇವದಾಸ ಶೆಣೈ ವಿಚಾರ ಹಂಚಿಕೊಂಡರು ಕಾಯ೯ಕ್ರಮ ದ ಅಧ್ಯಕ್ಷತೆಯನ್ನು ಇತಿಹಾಸ ತಜ್ಞರಾದ ಶ್ರೀ ಮುರುಗೇಶ್ ಟಿ ವಹಿಸಿದ್ದರು. ಕಾಯ೯ಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಸ್ವಯಂಸೇವಕರು ಕಾಲೇಜಿನ ಬೊಧಕ ಸಿಬ್ಬಂದಿಯವರು ವಿಧ್ಯಾಥಿ೯ಗಳು, ಕುಟುಂಬಸ್ಥರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ವಿಚಾರವನ್ನು ಕಾಯ೯ಕ್ರಮ ಸಂಚಾಲಕರಾದ ( ಸ್ವರಾಜ್ಯ 75) ಪ್ರದೀಪ ಕುಮಾರ್ ಬಸ್ರೂರು ವಿಚಾರ ರೂಪುರೇಷ ತಿಳಿಸಿದರು. ನಿರೂಪಣೆಯನ್ನು ಎಸ್ .ಡಿ.ಎಂ. ಕಾಲೇಜುಉಜಿರೆಯ ಉಪನ್ಯಾಸಕಿ ಕುಮಾರಿ ಕುಮಾರಿ ಅಭಿಜ್ಞಾ ಉಪಾಧ್ಯಾಯ, ಧನ್ಯವಾದವನ್ನು ಮಣಿಪಾಲ ಜ್ಞಾನಸುಧಾ ಎನ್ .ಎಸ್.ಎಸ್. ರವಿ ಜಿ ನಡೆಸಿದರು.

