ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ, ಭಜನಾ ಆರಾಧ್ಯ ದೇವರಾದ ವಿಠೋಬಾ ರುಖುಮಾಯಿ ಶ್ರೀ ದೇವರ ಸನ್ನಿಧಿಯಲ್ಲಿ ಈ ಬಾರಿಯ 125 ವರ್ಷದ ಭಜನಾ ಸಪ್ತಾಹ ದೇವಳದ ಪ್ರಧಾನ ಅರ್ಚಕರಾದ ವಿನಾಯಕ ಭಟ್ ದೀಪ ಬೆಳಗಿಸಿ , ಮಹಾ ಮಂಗಳಾರತಿ ಬೆಳಗಿಸಿ ಚಾಲನೆ ನೀಡಿದರು. ಜು 30 ರಿಂದ 7 ದಿನಗಳ ಕಾಲ ಊರ ಪರಊರ ಭಜನಾ ತಂಡಗಳಿಂದ ಅಹೋರಾತ್ರಿ ನಿರಂತರ ಭಜನಾ ಕಾರ್ಯಕ್ರಮ ವೈಭವದಿಂದ ನೆಡೆಯಲಿದೆ. ಧಾರ್ಮಿಕ ಪೂಜಾ ವಿಧಾನಗಳನ್ನು ಹಾಗೂ ಸಮೂಹಿಕ ಪ್ರಾರ್ಥನೆ , ಮಹಾ ಪೂಜೆ ವಿನಾಯಕ್ ಭಟ್ ನೆರವೇರಿಸಿದರು. ಅರ್ಚಕರಾದ ದಯಾಘಾನ್ ಭಟ್ , ದೀಪಕ್ ಭಟ್ , ಗಿರೀಶ್ ಭಟ್ ಸಹಕರಿಸಿದರು , ಶ್ರೀ ದೇವರಿಗೆ ವಿಶೇಷ ಅಲಂಕಾರ , ನೂರಾರು ಭಕ್ತರೂ ಭಕ್ತಿಯಿಂದ ಜೈ ವಿಠಲ್ ಹರಿ ವಿಠಲ್ ನಾಮ ಸ್ಮರಣೆ ಹಾಡುತ್ತ ಭಜನಾ ಸೇವೆ ಯಲ್ಲಿ ಪಾಲ್ಗೊಂಡರು. ಆಡಳಿತ ಮಂಡಳಿಯ ಪಿ ವಿ ಶೆಣೈ , ವಿಶ್ವನಾಥ್ ಭಟ್ , ವಸಂತ್ ಕಿಣೆ, ಶಾಂತಾರಾಮ್ ಪೈ , ಗಣೇಶ್ ಕಿಣಿ , ಉಮೇಶ್ ಪೈ , ಕೈಲಾಸನಾಥ ಶೆಣೈ , ನಾರಾಯಣ ಪ್ರಭು , ಭಜನಾ ಮೊಹೋತ್ಸವದ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ , ಪ್ರಕಾಶ್ ಭಕ್ತ , ಭಾಸ್ಕರ ಶೆಣೈ ಹಾಗೂ ಆಡಳಿತ ಮಂಡಳಿಯ ಸದಸ್ಯರು , ಜಿ ಎಸ್ ಬಿ ಯುವಕ ಮಂಡಳಿ ಸದಸ್ಯರು , ಭಗಿನಿ ವೃಂದ ಸದಸ್ಯರು , ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು , ಭಜನಾ ಮಹೋತ್ಸವ ಸಮಿತಿಯ ಸದಸ್ಯರು , ಊರ ಪರಊರ ನೂರಾರು ಭಜನಾ ಮಂಡಳಿಯ ಸದಸ್ಯರು , ಸಾವಿರಾರು ಸಮಾಜ ಬಾಂದವರು ಉಪಸ್ಥರಿದ್ದರು .