ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಭಜನಾ ಸಪ್ತಾಹ ಅಂಗವಾಗಿ ೯ ನೇ ದಿನವಾದ ಸೋಮವಾರ ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ಶ್ರೀದೇವಿ ಭೂದೇವಿ ಸಹಿತ ಗರುಡಾರೂಢ ಶ್ರೀ ಲಕ್ಷ್ಮೀ ವೆಂಕಟೇಶ ವಿಶೇಷ ಅಲಂಕಾರವನ್ನು ಪ್ರಧಾನ ರ‍್ಚಕರಾದ ವಿನಾಯಕ ಭಟ್ ಹಾಗೂ ದಯಾಘನ್ ಭಟ್ ನೆರವೇರಿಸಿದರು
ದೇವಾಲಯ ಹಾಗೂ ಭಜನಾ ಸಾಳಿಯನ್ನು ವಿಶೇಷ ಹೂವಿನಿಂದ ಅಲಂಕಾರ ಈ ಸಂದರ್ಭದಲ್ಲಿ ಮಹಾ ರಂಗಪೂಜೆ ನೆಡೆಯಿತು , ಸಾವಿರಾರು ಭಕ್ತರೂ ಸರತಿ ಸಾಲಿನಲ್ಲಿ ಶ್ರೀದೇವರ ದರ್ಶನ ಪಡೆದು ಧನ್ಯರಾದರು.
ಆಡಳಿತ ಮಂಡಳಿಯ ಸದಸ್ಯರು , ಜಿ ಎಸ್ ಬಿ ಯುವಕ ಮಂಡಳಿ ಸದಸ್ಯರು , ಜಿ ಎಸ್ ಬಿ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥರಿದ್ದರು.