ಉಡುಪಿ: ತುಳುಕೂಟ ಉಡುಪಿ (ರಿ) ಮತ್ತು ಕನ್ನಡ ಮತ್ತು ಸಂಸ್ಕತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ 30ನೇ ವರ್ಷದ ವಿಶ್ವಪ್ರಭಾ ಪ್ರಾಯೋಜಿತ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಆಗಸ್ಟ್ 17 |ಭಾನುವಾರ ಸಂಜೆ 4 ಗಂಟೆಗೆ ಕಿದಿಯೂರು ಹೋಟೆಲ್‌ನ ರೂಫ್ ಟಾಪ್ ಸಭಾಂಗಣ ಉಡುಪಿಯಲ್ಲಿ ಜರುಗಲಿದೆ.
ಉಡುಪಿ ತುಳುಕೂಟದ ಅಧ್ಯಕ್ಷರಾಗಿರುವ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭದ್ರಾವತಿ ತುಳುಕೂಟದ ಅಧ್ಯಕ್ಷ, ಉದ್ಯಮಿ ಸುಧಾಕರ ಶೆಟ್ಟಿ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉದ್ಯಮಿ ಪ್ರಭಾಕರ ಪೂಜಾರಿ, ಸಮಾಜ ಸೇವಕ ಯು. ವಿಶ್ವನಾಥ ಶೆಣೈ ಭಾಗವಹಿಸಲಿದ್ದಾರೆ.
ಅಕೇರಿದ ಎಕ್ಕ್ ಪುಸ್ತಕ ಬಹುಮಾನ ವಿಜೇತಗೊಂಡಿದ್ದು, ಶಾರದಾ ಎ. ಅಂಚನ್ ಪ್ರಶಸ್ತಿ ಸ್ವಿಕರಿಸಲಿದ್ದಾರೆ. ಸಾಹಿತಿ ಸುಲೋಚನ ಜನಾರ್ಧನ್ ಪರಿಚಯ ಮಾಡಲಿದ್ದಾರೆ. ಕಳೆದ ಎಸ್‌ಎಸ್‌ಎಲ್‌ಸಿಯಲ್ಲಿ ತುಳು ಪಠ್ಯದಲ್ಲಿ ಶೇ. ೧೦೦ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಸಮ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.