ಗೃಹಿಣಿಯರಿಗೆ ಯುಗಾದಿ-ರಂಜಾನ್ ಗಿಫ್ಟ್

0
10

ಮಹಿಳೆಯರ ಖಾತೆಗೆ ₹6,000 ಜಮಾ !

ಯುಗಾದಿ ಹಾಗೂ ರಂಜಾನ್ ಹಬ್ಬಗಳ ಸಂಭ್ರಮದಲ್ಲಿರುವ ರಾಜ್ಯದ ಮಹಿಳೆಯರಿಗೆ ಸರ್ಕಾರದಿಂದ ಸಿಹಿ ಸುದ್ದಿ ದೊರೆತಿದೆ. ಬಹುನಿರೀಕ್ಷಿತ ‘ಗೃಹಲಕ್ಷ್ಮಿ’ ಯೋಜನೆಯ 27ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಹಬ್ಬದ ಖರ್ಚಿಗೆ ದೊಡ್ಡ ಮಟ್ಟದ ಆಸರೆಯಾಗಿದೆ.

ಈ ಬಾರಿ ಬಾಕಿ ಉಳಿದಿದ್ದ ಮೂರು ಕಂತುಗಳ ಹಣವನ್ನು ಒಟ್ಟಾಗಿ ಬಿಡುಗಡೆ ಮಾಡಲಾಗಿದ್ದು, ಅರ್ಹ ಮಹಿಳೆಯರ ಖಾತೆಗೆ ತಲಾ ₹6,000 ಜಮೆಯಾಗುತ್ತಿದೆ. ಈಗಾಗಲೇ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ.

ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ, ಕೊಡಗು, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಗದಗ, ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಿದೆ.

ಉಳಿದ ಜಿಲ್ಲೆಗಳ ಫಲಾನುಭವಿಗಳಿಗೆ ಮುಂದಿನ ಮೂರು ದಿನಗಳೊಳಗಾಗಿ ಹಣ ತಲುಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ರಮಗಳನ್ನು ವೇಗಗೊಳಿಸಿದೆ.

ಯುಗಾದಿ ಹಬ್ಬದ ಬೆನ್ನಲ್ಲೇ ರಂಜಾನ್ ಹಬ್ಬವೂ ಇರುವ ಹಿನ್ನೆಲೆ, ಈ ಹಣ ಬಿಡುಗಡೆಯು ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಹೆಚ್ಚಿನ ನೆರವಾಯಿತು. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಕಂತುಗಳು ಈಗ ಒಟ್ಟಾಗಿ ಜಮೆಯಾಗಿರುವುದು ಗೃಹಿಣಿಯರ ಸಂತೋಷಕ್ಕೆ ಕಾರಣವಾಗಿದೆ.

ಫಲಾನುಭವಿಗಳು ತಮ್ಮ ಖಾತೆಗೆ ಹಣ ಜಮೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಬ್ಯಾಂಕ್ ಪಾಸ್ಬುಕ್ ಅಪ್ಡೇಟ್ ಮಾಡಬಹುದು ಅಥವಾ ‘DBT Karnataka’ ಆಪ್ ಮೂಲಕ ಸ್ಟೇಟಸ್ ಪರಿಶೀಲಿಸಬಹುದು.

LEAVE A REPLY

Please enter your comment!
Please enter your name here