ವರದಿ ರಾಯಿ ರಾಜ ಕುಮಾರ
ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಶ್ರೀ ಜನಾರ್ದನ ದೇವಾಲಯವು ಒಂದು ಸಾವಿರ ವರ್ಷಗಳಿಗಿಂತ ಹಿಂದಿನ ದಾಖಲೆಯನ್ನು ಹೊಂದಿರುವ ದೇವಾಲಯ. ಬಂಗಾಡಿ ಸೀಮೆಯ ಪ್ರಧಾನ ದೇವಾಲಯವಾಗಿದೆ.
ಈ ದೇವಾಲಯದ ಪುನಹ ಪ್ರತಿಷ್ಠಾ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಮಾರ್ಚ್ 3 ರಿಂದ 11ರ ತನಕ ನಡೆಯಲಿದೆ. ಮಾರ್ಚ್ 2 ರಂದು ದೇವಳದ ನೂತನ ಆಡಳಿತ ಕಾರ್ಯಾಲಯ ‘ಸುಶಾಸನ’ ಮತ್ತು ತಂತ್ರಿ ನಿವಾಸ ‘ಸುವಾಸ’ ಉದ್ಘಾಟನೆಗೊಳ್ಳಲಿದೆ. ಅದೇ ರೀತಿ ಬ್ರಹ್ಮ ಕಲಶೋತ್ಸವ ಕಾರ್ಯಾಲಯ’ ಸುರಭಿ, ಭೋಜನ ಶಾಲೆ ‘ಸುಪ್ರಸಾದ, ಹಸಿರು ವಾಣಿ ಉಗ್ರಾಣ ‘ಸಮೃದ್ಧಿ, ಪಾಕಶಾಲೆ’ ಸುರುಚಿ ಉದ್ಘಾಟನೆಗೊಳ್ಳಲಿದೆ.
ಮಾರ್ಚ್ 3ರಂದು ವಿಶೇಷ ಶತರುದ್ರಾಭಿಷೇಕ, ವೈದಿಕ ಕಾರ್ಯಕ್ರಮಗಳು, ಮಾರ್ಚ್ ನಾಲ್ಕರಂದು ವೈದಿಕ ಕಾರ್ಯಕ್ರಮಗಳ ತರುವಾಯ, ನೂತನ ವಿಜಯ ಗೋಪುರ ಲೋಕಾರ್ಪಣೆಗೊಳ್ಳಲಿದೆ. ಸಭಾ ಕಾರ್ಯಕ್ರಮದಲ್ಲಿ ದೇವಾಲಯದ ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಗುವುದು.
ಮಾರ್ಚ್ 5 ರಂದು ವಿಷ್ಣು ಯಾಗ, ಅಥರ್ವ ಶೀರ್ಷ ಗಣ ಯಾಗ, ಇತ್ಯಾದಿ ವೈದಿಕ ಕಾರ್ಯಕ್ರಮಗಳು. ತರುವಾಯ ಸಭಾ ಕಾರ್ಯಕ್ರಮ.
ಮಾರ್ಚ್ 6 ರಂದು ಚಂಡಿಕಾಯಾಗ, ವಿವಿಧ ವೈದಿಕ , ಸಭಾ ಕಾರ್ಯಕ್ರಮ.
ಮಾರ್ಚ್ 7 ರಂದು ವಿಷ್ಣು ಯಾಗ, ಆಶ್ಲೇಷ ಬಲಿ, ವಿವಿಧ ವೈದಿಕ , ಸಭಾ ಕಾರ್ಯಕ್ರಮ.
ಮಾರ್ಚ್ 8ರಂದು ದೇವರ ಪುನಹ ಪ್ರತಿಷ್ಠೆ, ನೂತನ ಬ್ರಹ್ಮರಥ, ಪುಷ್ಪ ರಥ ಸಮರ್ಪಣೆ, ವಿವಿಧ ವೈದಿಕ, ಸಭಾ ಕಾರ್ಯಕ್ರಮ.
ಮಾರ್ಚ್ 9ರಂದು ರುದ್ರಯಾಗ, ಇತರ ವೈದಿಕ ಹಾಗೂ ಸಭಾ ಕಾರ್ಯಕ್ರಮ.
ಮಾರ್ಚ್ ಹತ್ತರಂದು ಪೂರ್ಣ ನವಗ್ರಹ ಯಾಗ, ವಿವಿಧ ವೈದಿಕ ಹಾಗೂ ಸಭಾ ಕಾರ್ಯಕ್ರಮಗಳು.
ಮಾರ್ಚ್ 11 ರಂದು ಹರಿವಾಯು ಸ್ತುತಿ ಪುರಸ್ಚರ ಹೋಮ, ಕಲಶಾಭಿಷೇಕ, ನೂತನ ಬ್ರಹ್ಮರಥದಲ್ಲಿ ಉಭಯದೇವರ ಬ್ರಹ್ಮರಥೋತ್ಸವ, ಸಭಾ ಕಾರ್ಯಕ್ರಮ ಜರುಗಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ಪ್ರತಿದಿನ ಬೆಳಿಗ್ಗೆ ಹೊರೆ ಕಾಣಿಕೆ ಸಮರ್ಪಣೆ, ಭಜನಾಮೃತಗಳು ನಿರಂತರ ನಡೆಯಲಿವೆ. ಸಂಜೆ ಭಕ್ತಿ ಸಂಗೀತ, ರಾತ್ರಿ ಏಳರಿಂದ ಗಾನ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

