ಉಜಿರೆ : ಬೃಹತ್ ರಕ್ತದಾನ ಶಿಬಿರ

0
5

ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ (ರಿ.) ಉಜಿರೆ ಇವರ ನೇತೃತ್ವದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ, ಸೇವಾಭಾರತಿ (ರಿ.), ಕನ್ಯಾಡಿ ॥, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎಸ್.ಡಿ.ಎಂ ಕಾಲೇಜು( ಸ್ವಾಯತ್ತ), ಉಜಿರೆ, ಕೆ.ಎಂ.ಸಿ. ಬ್ಲಡ್ ಬ್ಯಾಂಕ್, ಮಂಗಳೂರು ಇವರ ಸಹಯೋಗದೊಂದಿಗೆ 10ನೇ ವರ್ಷದ ಬೃಹತ್ ರಕ್ತದಾನ ಶಿಬಿರವು ಜನವರಿ 11 ರಂದು ಉಜಿರೆ ಶಾರದಾ ಮಂಟಪದಲ್ಲಿ ಜರುಗಿತು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಶರತ್ ಕೃಷ್ಣ ಪಡುವೆಟ್ನಾಯ ರವರು ಉದ್ಘಾಟಿಸಿ, ರಕ್ತದಾನ ಜೀವನ ಧರ್ಮವಾಗಬೇಕು, ಜೀವನದ ಭಾಗವಾಗವೇಕು. ಆಗ ನಿರಂತರತೆಯೆಡೆಗೆ ಕೊಂಡೊಯ್ಯುತ್ತದೆ ಎಂದು ಶುಭಹಾರೈಸಿದರು.

ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ (ರಿ.), ಅಧ್ಯಕ್ಷರಾದ ಶೇಖರ ಗೌಡ, ವಿದ್ಯಾನಗರ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ರೋ। ಪ್ರೊ| ಪ್ರಕಾಶ್ ಪ್ರಭು, ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ (ರಿ) ಕಾರ್ಯದರ್ಶಿಗಳಾದ ಪ್ರಕಾಶ್ ಫೆರ್ನಾಂಡಿಸ್, ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ (ರಿ.), ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಜಿ.ಕೆ, ದ.ಕ ವೃತ್ತಿ ನಿರತ ಔಷಧಿ ತಜ್ಞರ ಸಂಘ(ರಿ.), ಕಾರ್ಯದರ್ಶಿಗಳಾದ ಶ್ರೀಧರ ಕೆ. ವಿ, ಕನ್ಯಾಡಿ ಸೇವಾಭಾರತಿ (ರಿ,), ಅಧ್ಯಕ್ಷರಾದ ಸ್ವರ್ಣ ಗೌರಿ, ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಮಹಿಳಾ ವೇದಿಕೆಯ ಅಧ್ಯಕ್ಷರು ರಾಜೇಶ್ವರಿ, ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ (ರಿ.), ಸಂಚಾಲಕರಾದ ಪ್ರಕಾಶ್ ಗೌಡ, ಅಪ್ರಮೇಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಬಿರದ ಯಶಸ್ಸಿಗೆ ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸೇವಾ ಟ್ರಸ್ಟ್ (ರಿ.), ಬೆಳ್ತಂಗಡಿ ವಲಯ, ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ., ಉಜಿರೆ ಶಾಖೆ, ಭರೂಕ ಪವರ್ ಪ್ರಾಜೆಕ್ಟ್ ನಿಡ್ಲೆ, ಯುವ ವೇದಿಕೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಉಜಿರೆ, ಮಹಿಳಾ ವೇದಿಕೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಉಜಿರೆ, ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಕಿರಿಯಾಡಿ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ಬೆಳಾಲು, ಸರಸ್ವತಿ ಭಜನಾ ಮಂಡಳಿ ವಿವೇಕಾನಂದ ನಗರ, ಉಜಿರೆ ಶಿವ ಪಾರ್ವತಿ ಮಹಿಳಾ ಭಜನಾ ಮಂಡಳಿ ಚಾಮುಂಡಿಬೆಟ್ಟ, ಓಡಲ, ಕೂಟ ಮಹಾಜಗತ್ತು ಅಂಗಸಂಸ್ಥೆ, ಬೆಳ್ತಂಗಡಿ, ವರ್ತಕರ ಸಂಘ ಉಜಿರೆ, ವನದುರ್ಗಾ ಸ್ಪೋರ್ಟ್ಸ್ ಕ್ಲಬ್ ಬರೆಂಗಾಯ,ನಿಡ್ಲೆ, ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ, ಭಾರತ್ ಆಟೋ ಕಾರ್ಸ್ ಪ್ರೈ. ಲಿ., ಉಜಿರೆ, ಭಕ್ತ ಕುಂಬಾರರ ಸಂಘ ಗಾಂಧಿನಗರ, ಉಜಿರೆ, ಶ್ರೀ ಶಾರದಾ ಸೇವಾ ಟ್ರಸ್ಟ್ (ರಿ.), ಉಜಿರೆ, ಪ್ರಗತಿ ಮಹಿಳಾ ಮಂಡಲ (ರಿ.), ಉಜಿರೆ, ಪರಶುರಾಮ ಫ್ರೆಂಡ್ಸ್ ಮೂಲಾರ್, ಹವ್ಯಕ ವಲಯ, ಉಜಿರೆ, ಪ್ರಗತಿ ಯುವಕ ಮಂಡಲ (ರಿ.), ಮಾಚಾರು, ಸುಜ್ಞಾನ ನಿಧಿ ಯೋಜನೆ, ಬದನಾಜೆ ಶಾಲೆ, ಮಿತ್ರ ಯುವಕ ಮಂಡಲ, ಅರಳಿ, ಶ್ರೀ ಆದಿಶಕ್ತಿ ಫ್ರೆಂಡ್ಸ್, ಮಲೆಬೆಟ್ಟು, ಉಜಿರೆ ಮೈತ್ರಿ ಫ್ರೆಂಡ್ಸ್ ಕ್ಲಬ್ ಸಹಕರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ(ರಿ.), ಅಧ್ಯಕ್ಷರಾದ ಶೇಖರ ಗೌಡ ವಿದ್ಯಾನಗರ ಸ್ವಾಗತಿಸಿ, ಬಾಲಕೃಷ್ಣ ಕೊರಮೇರು ನಿರೂಪಿಸಿ, ದ.ಕ ವೃತ್ತಿ ನಿರತ ಔಷಧಿ ತಜ್ಞರ ಸಂಘ(ರಿ.), ಕಾರ್ಯದರ್ಶಿಗಳಾದ ಶ್ರೀಧರ ಕೆ. ವಿ ಧನ್ಯವಾದವಿತ್ತರು. ಶಿಬಿರದಲ್ಲಿ ಒಟ್ಟು 97 ಯೂನಿಟ್ಸ್ ರಕ್ತ ಸಂಗ್ರಹಿಸಲಾಯಿತು.

LEAVE A REPLY

Please enter your comment!
Please enter your name here