ಉಜಿರೆ: ಉಜಿರೆ ಗ್ರಾಮದ ನೀರಚಿಲುಮೆ ಬಳಿ “ಸಮೃದ್ಧಿ” ಮನೆ ನಿವಾಸಿ ವೃಷಭರಾಜ ಆರಿಗರ ಪತ್ನಿ ಸಂಪದ ಬಲ್ಲಾಳ್ (೫೮) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ ಪತಿ ಮತ್ತು ಮಗಳು ಇದ್ದಾರೆ.
ಬೆಳ್ತಂಗಡಿ ಬಸದಿ ಬಳಿ ಇರುವ ರುದ್ರಭೂಮಿಯಲ್ಲಿ ಬುಧವಾರ ಆಕೆಯ ಅಂತ್ಯಸಂಸ್ಕಾರ ನಡೆಸಲಾಯಿತು.
ಉಜಿರೆಯಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯಾಲಯದಲ್ಲಿ ಕಚೇರಿಸಹಾಯಕರಾಗಿ ಅವರು ಈಗಾಗಲೆ ೩೪ ವರ್ಷಗಳ ಸೇವೆ ಪೂರೈಸಿದ್ದು, ನಿವೃತ್ತಿಯ ಅಂಚಿನಲ್ಲಿದ್ದರು.